ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈಗಿನ ಸಿಎಂಗೆ ನಾವೇ ಹೆದರಿ ಮನೆ ಬಾಗಿಲಿಗೆ ನಿಲ್ಲುವ ಸ್ಥಿತಿಯಿದೆ

07:36 PM Sep 20, 2024 IST | Samyukta Karnataka

ಬಾಗಲಕೋಟೆ: ಈಗ ಅಲ್ಲದಿದ್ದರೂ ಮುಂದಿನ ೫ ವರ್ಷ ಅಥವಾ ೧೦ ವರ್ಷಕ್ಕಾದರೂ ದೇವರು ಒಬ್ಬ ಒಳ್ಳೆಯ ಮುಖ್ಯಮಂತ್ರಿಯನ್ನು ಕೊಟ್ಟೆ ಕೊಡುತ್ತಾನೆ ಅವರು ಮೀಸಲಾತಿ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಡಾ.ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು, ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಹಿಂದಿನಂತೆ ಪ್ರಬಲವಾಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಅಚ್ಚರಿ ಮೂಡಿಸಿದರು. ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ ಭಯ, ಗೌರವಯಿತ್ತು, ಈಗಿನವರ(ಸಿದ್ದರಾಮಯ್ಯ) ಅವರಿಗೆ ನಾವೇ ಭಯಪಡುವ ಸ್ಥಿತಿಯಿದೆ. ಬೊಮ್ಮಾಯಿ ಅವರು ಕರೆದಲ್ಲಿಗೆ ಬರುತ್ತಿದ್ದರು. ಈಗ ನಾನೇ ಮನೆ ಬಾಗಿಲಿಗೆ ಹೋಗಿ ನಿಲ್ಲುವ ಸ್ಥಿತಿಯಿದೆ. ಸಿಎಂ ಯಾರಿದ್ದರೂ ಮೀಸಲಾತಿ ವಿಚಾರವಾಗಿ ಸ್ಪಂದಿಸಲೇಬೇಕು. ದೇವರು ಈಗ ಅಲ್ಲದಿದ್ದರೂ ಮುಂದಿನ ೫ ಅಥವಾ ೧೦ ವರ್ಷದಲ್ಲಿ ಒಬ್ಬ ಒಳ್ಳೆಯ ಮುಖ್ಯಮಂತ್ರಿಯನ್ನು ಕೊಟ್ಟೆ ಕೊಡುತ್ತಾನೆ ಅವರು ಮೀಸಲಾತಿ ವಿಷಯವನ್ನು ಈಡೇರಿಸುತ್ತಾರೆ. ಈಗ ಸ್ಪಂದನೆ ಸಿಕ್ಕಿಲ್ಲ ಎಂದು ನಾವು ಕುಗ್ಗುವ ಅವಶ್ಯಕತೆ ಇರುವುದಿಲ್ಲ ಹೋರಾಟ ನಿರಂತರವಾಗಿ ಇರಲಿದೆ ಎಂದರು. ಶಾಸಕರ ಮೂಲಕ ಹೋರಾಟ ನಡೆದಿದ್ದು, ವಕೀಲರ ಮೇಲೆ ನನಗೆ ಭರವಸೆಯಿದೆ. ಅವರಿಂದ ನಿರೀಕ್ಷೆ ಮೀರಿದ ಸ್ಪಂದನೆ ಸಿಕ್ಕಿದೆ ಹೋರಾಟ ಮುಂದವರಿಸುವೆ ಎಂದು ಹೇಳಿದರು.

Tags :
#bagalkote #ಬಾಗಲಕೋಟೆbagalkotBasava Jaya Mruthyunjaya Swamijipanchamasali
Next Article