ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈಶ್ವರಪ್ಪ ಮನವೊಲಿಕೆ ಶೀಘ್ರ

12:48 PM Mar 22, 2024 IST | Samyukta Karnataka

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ಮನವೊಲಿಸುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಆಸೆ ಈಶ್ವರಪ್ಪನವರಿಗೂ ಇದೆ. ಹೀಗಾಗಿ ಅವರ ಮನವೊಲಿಸುವಲ್ಲಿ ನಮ್ಮ ವರಿಷ್ಠರು ಯಶಸ್ವಿಯಾಗುತ್ತಾರೆ. ಕೊಪ್ಪಳ ಸಂಗಣ್ಣ ಕರಡಿ, ಪ್ರತಾಪ್ ಸಿಂಹ, ಸದಾನಂದಗೌಡರು ಪಕ್ಷದ ಪರವಾಗಿಯೇ ಇರುತ್ತಾರೆ. ಇವರೆಲ್ಲರೂ ಪಕ್ಷವನ್ನು ಕಟ್ಟಿ ಬೆಳೆಸಿದವರು. ಟಿಕೆಟ್ ಸಿಗದಿದ್ದಾಗ ನಿರಸೆಯಾಗುವುದು ಸ್ವಾಭಾವಿಕ. ಆದರೆ, ಪಕ್ಷದ ಮೇಲಿರುವ ಪ್ರೀತಿಯಿಂದಾಗಿ ಪಕ್ಷದ ಪರ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಮಾಡಿದ್ದ ಮೇಕೆದಾಟು ಪಾದಯಾತ್ರೆ ಕೂಡ ರಾಜಕೀಯ ನಾಟಕದ ಒಂದು ಭಾಗ ಎಂಬುದು ಈಗ ಸಾಬೀತಾಗಿದೆ. ಪಾದಯಾತ್ರೆ ಬದಲು ಅಲಯನ್ಸ್ ಪಾರ್ಟ್ನರ್ ಡಿಎಂಕೆ ಜೊತೆ ಮಾತನಾಡಲು ಹೇಳಿದ್ದೆವು. ಎರಡು ರಾಜ್ಯಕ್ಕೆ ಅನುಕೂಲವಾಗುವ ಯೋಜನೆ ಇದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಲು ಹೇಳಿದ್ದೆವು. ಆದರೆ, ಕಾಂಗ್ರೆಸ್ ಪಕ್ಷ ಸಣ್ಣ ಪ್ರಯತ್ನವನ್ನೂ ಮಾಡಿರಲಿಲ್ಲ. ಆಗ ಕೋರ್ಟ್ನಲ್ಲಿ ಪ್ರಕರಣ ಇದ್ದರೂ ಕೂಡ ಕೋರ್ಟ್ನಲ್ಲಿ ಇಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯನವರ ನಾಟಕ ಈಗ ಬಹಿರಂಗವಾಗಿದೆ ಎಂದರು.
ಕಾವೇರಿಯ ಯಾವುದೇ ಯೋಜನೆಗೆ ಅವಕಾಶ ಕೊಡುವುದಿಲ್ಲ ಎಂದು ಡಿಎಂಕೆ ತನ್ನ ಪರಿಣಾಳಿಕೆಯಲ್ಲಿ ಹೇಳಿಕೊಂಡಿದೆ. ರಾಜ್ಯದ ಹಿತಾಸಕ್ತಿ ಕಾಪಾಡಬೇಕಾದರೆ ಇಂಡಿ ಅಲಯನ್ಸ್ ನಿಂದ ಕಾಂಗ್ರೆಸ್ ಹೊರಗೆ ಬರಬೇಕು. ದ್ವಂದ್ವ ನಿಲುವು ಬಿಟ್ಟು ಸ್ಪಷ್ಟವಾದ ಅಭಿಪ್ರಾಯ ಕಾಂಗ್ರೆಸ್ ನಿಂದ ಬರಬೇಕು ಎಂದು ಆಗ್ರಹಿಸಿದರು.
ಅಧಿಕಾರದಲ್ಲಿರುವ ಕಮಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಲೋಕಸಭೆಗೆ ಸ್ಫರ್ಧಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಮಂತ್ರಿಗಳು ನಿಲ್ಲಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮಂತ್ರಿಗಳ ಮನೆಯವರನ್ನ ಚುನಾವಣೆಗೆ ನಿಲ್ಲಿಸುವ ದುಸ್ಥಿತಿ ಬಂದಿದೆ ಎಂದ ಅವರು, ಜಗದೀಶ ಶೆಟ್ಟರ ಅವರ ಟಿಕೆಟ್ ನಾಳೆ, ನಾಡಿದ್ದು ಫೈನಲ್ ಆಗಲಿದೆ ಎಂದರು.

Next Article