ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈ ದಾಖಲೆಗಳಿದ್ದರೆ ಮತ ಹಾಕಬಹುದು

11:06 PM Apr 25, 2024 IST | Samyukta Karnataka

ಮತದಾರರ ಗುರುತಿನ ಚೀಟಿ(ಎಪಿಕ್), ಆಧಾರ್ ಕಾರ್ಡ್, ಪಡಿತರ ಚೀಟಿ(ರೇಷನ್ ಕಾರ್ಡ್), ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಪತ್ರ, ಸರ್ಕಾರ ವಿತರಿಸಿದ ಹಿರಿಯ ನಾಗರಿಕರ ಕಾರ್ಡ್, ನಿವೃತ್ತ ಸೈನಿಕರ ಸಿಎಸ್‌ಡಿ ಕ್ಯಾಂಟಿನ್ ಕಾರ್ಡ್, ಹೆಸರಿರುವ ಆಸ್ತಿ ನೋಂದಣಿ ಪತ್ರ, ಪಹಣಿ, ನರೇಗಾ ಉದ್ಯೋಗ ಕಾರ್ಡ್, ಭಾವಚಿತ್ರ ಸಹಿತ ಬ್ಯಾಂಕ್ ಪಾಸ್‌ಬುಕ್, ಚಾಲನಾ ಪರವಾನಗಿ(ಡ್ರೈವಿಂಗ್ ಲೈಸನ್ಸ್) ಪ್ಯಾನ್‌ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ಪತ್ರ, ಕೇಂದ್ರ/ರಾಜ್ಯ ಸರ್ಕಾರಿ ನೌಕರರ ಗುರುತಿನ ಕಾರ್ಡ್, ಫೋಟೋ ಸಹಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗುರುತಿನ ಚೀಟಿ, ಸರ್ಕಾರ ನೀಡಿರುವ ವಿಕಲಚೇತನರ ಗುರುತಿನ ಚೀಟಿ, ಸಂಸದ/ಶಾಸಕರ ಕಚೇರಿಯ ಅಧಿಕೃತ ಗುರುತಿನ ಪತ್ರ, ವಿದ್ಯಾರ್ಥಿಗಳಿಗೆ ಶಿಕ್ಷಣಸಂಸ್ಥೆಗಳು ವಿತರಿಸುವ ಐಡಿಕಾರ್ಡ್.
ಹೀಗೆ ಚೆಕ್ ಮಾಡಿಕೊಳ್ಳಿ
ಮೊಬೈಲ್‌ನಲ್ಲಿ ಮೆಸೇಜ್ ಕಳುಹಿಸುವ ಸೆಕ್ಷನ್‌ಗೆ ಹೋಗಿ ‘ಎಪಿಕ್’ ಸಂಖ್ಯೆ ನಮೂದಿಸಿ ಬಳಿಕ ವೋಟರ್ ಐಡಿ ಸಂಖ್ಯೆ ನಮೂದಿಸಿ. ನಂತರ ಆ ಎಸ್‌ಎಂಎಸ್ ಅನ್ನು ೯೨೧೧೭೨೮೦೮೨ ಅಥವಾ ೧೯೫೦ ಸಂಖ್ಯೆಗೆ ಕಳುಹಿಸಬೇಕು. ತಕ್ಷಣವೇ ನಿಮ್ಮ ಹೆಸರು ಮತ್ತು ಮತಗಟ್ಟೆಯ ಸಂಖ್ಯೆ ಕಾಣಸಿಗುತ್ತದೆ. ನಿಮ್ಮ ಹೆಸರು ವೋಟರ್ ಲಿಸ್ಟ್ನಲ್ಲಿ ಇಲ್ಲದಿದ್ದಲ್ಲಿ ‘No Record Found’ ಎಂಬ ಸಂದೇಶ ಬರುತ್ತದೆ.
ವೆಬ್‌ಸೈಟ್‌ನಲ್ಲಿ ಹೇಗೆ
https://voters.eci.gov.in/ ತೆರೆದು ಫೋನ್ ನಂಬರ್, ಪಾಸ್‌ವರ್ಡ್ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ. ವೆಬ್‌ಸೈಟ್‌ಗೆ ಹೊಸಬರಾಗಿದ್ದರೆ ಮೊದಲು ನೊಂದಾಯಿಸಿಕೊಳ್ಳಬೇಕು. ಡೌನ್‌ಲೋಡ್ E-EPIC ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಬಳಿಕ ಮತದಾರರ ಗುರುತಿನ ಚೀಟಿಯಲ್ಲಿರುವ EPIC ಸಂಖ್ಯೆಯನ್ನು ನಮೂದಿಸಿ. ಒಮ್ಮೆ ಇದನ್ನು ಮಾಡಿದ ಬಳಿಕ, ವಿಐಸಿ ಜೊತೆಗೆ E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. E-EPIC ಅನ್ನು ಹೊಂದಿದ್ದರೆ ಸಂಪೂರ್ಣ ಪುಟವನ್ನು ಅಥವಾ ವಿಐಸಿ ಪುಟವನ್ನು ಪ್ರಿಂಟ್ ಔಟ್ ತೆಗೆದುಕೊಂಡರೆ ಮತ ಚಲಾಯಿಸಲು ಇದನ್ನು ನಿಮ್ಮೊಂದಿಗೆ ಮತಗಟ್ಟೆಗೆ ಕೊಂಡೊಯ್ಯಬಹುದಾಗಿದೆ.
ಇವುಗಳ ಬಗ್ಗೆ ವಿಶೇಷ ಗಮನವಿರಲಿ
ಮತಗಟ್ಟೆ ಒಳಗಡೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ, ಮೊಬೈಲ್ ಫೋನ್ ಮನೆಯಲ್ಲೇ ಇಟ್ಟು ಹೋದರೆ
ಒಳ್ಳೆಯದು, ಕುಡಿಯುವ ನೀರಿನ ಬಾಟಲಿ ಕೈಯ್ಯಲ್ಲಿರಲಿ, ಮತಗಟ್ಟೆ ಹೊರಗಡೆ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಇರಲಿದೆ, ಮನೆಯ ಸಮೀಪ ಮತಗಟ್ಟೆಗೆ ನಡೆದೇ ಹೋಗುವುದು ಉತ್ತಮ, ೧೦೦ಮೀಟರ್ ಅಂತರದೊಳಗೆ ವಾಹನ ಕೊಂಡೊಯ್ಯುವಂತಿಲ್ಲ.

Next Article