ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈ ಬಾರಿ ಅವತಾರ್-2 ವೇಷಾಧಾರಿಯಾಗಿ ರವಿ ಕಟಪಾಡಿ‌

05:06 PM Aug 26, 2024 IST | Samyukta Karnataka

ಕಟಪಾಡಿ: ಹಕ್ಕಿಯ ಮೇಲೆ ಬಾನೆತ್ತರಲ್ಲಿ ಹಾರಿಕೊಂಡು ಬರುವ ಅವತಾರ್-2 ವೇಷಧಾರಿಯಾಗಿ ರವಿ ಕಟಪಾಡಿ ಈ ಬಾರಿ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು.
ರವಿ ಕಟಪಾಡಿ ಮಾತನಾಡಿ, ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ. ವೈದ್ಯಕೀಯ ವೆಚ್ಚ ಸಹಾಯ ಹಸ್ತ ನೀಡಿ ವೆಚ್ಚ ಭರಿಸುವುದಾಗಿ ಹೇಳಿದರು.
ದಿನೇಶ್ ಮಟ್ಟುರವರು ಇವರ ಅವತಾರ್‌ಗೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ. ಈ ಬಾರಿ ರವಿ ಕಟಪಾಡಿಯವರೊಂದಿಗೆ ಆಶಿಕ್‌ ಎಂಬ ಯುವಕ ವೇಷ ಧರಿಸಿದ್ದು, ವಿಶೇಷವಾಗಿದೆ. ರವಿ ಕಟಪಾಡಿ ತಂಡ, ಕಟಪಾಡಿ, ಶಂಕರಪುರ, ಉದ್ಯಾವರ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಲಿದ್ದಾರೆ ಎಂದು ಹೇಳಿದರು.

Tags :
mangaloreಕಟಪಾಡಿ
Next Article