ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಉಗಿದ ಉಗುಳ ಆಕಾಶಕ್ಕೆ ಮುಟ್ಟಲ್ಲ ಸೂರ್ಯನಿಗೆ ತಟ್ಟಲ್ಲ

07:44 PM Nov 03, 2024 IST | Samyukta Karnataka

ಚಿಕ್ಕಮಗಳೂರು: 'ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬೀಳುತ್ತದೆ. ನೀವು ಮೋದಿಯನ್ನ ಟೀಕೆ ಮಾಡೋದು ಸೂರ್ಯನಿಗೆ ಉಗಿದಂತಾಗುತ್ತದೆ. ಅದು ನಿಮ್ಮ ಮುಖಕ್ಕೆ ಮೆತ್ತಿ ಕೊಳ್ಳುತ್ತದೆ. ನೀವೇ ಮುಖ ತೊಳೆದುಕೊಳ್ಳಬೇಕು' ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೀಕಿಸಿದ್ದರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ನಾನು ವಕ್ಫ್ ಅದಾಲತ್ ನಡೆಸುತ್ತಿದ್ದೇನೆಂದು ಹೇಳಿಕೆ ನೀಡಿದ್ದವರು ಸಚಿವ ಜಮೀರ್ ಅಹ್ಮದ್, ಬರುತ್ತಾರೆ ಹೋಗುತ್ತಾರೆ ಎಂದು ನಾವಕಾವಸ್ತೆಗೆ ಅದಾಲತ್ ನಡೆಸಿದ್ದಾರೆಂದು ಭಾವಿಸಬೇಡಿ, ವಕ್ಫ್ ನೋಟಿಫಿಕೇಶನ್ನೇ ಕಾನೂನು ಬಾಹಿರ. ಚಿಕ್ಕಮಗಳೂರು ನಗರದ ಡಿ.ಆರ್. ಪೊಲೀಸ್ ಮೈದಾನ, ರತ್ನಗಿರಿ ಬೋರೆಯನ್ನು ಸಹ ವಕ್ಫ್ ಆಸ್ತಿ ಎಂದು ನೊಟೀಫಿಕೇಶನ್ ಹೊರಡಿಸಿದ್ದಾರೆ. ಅಸಂವಿಧಾನಿಕ ವಕ್ಫ್ ಕಾಯ್ದೆ ರದ್ದಾಗಬೇಕು, ಆಗ ಪೂರ್ತಿ ನ್ಯಾಯ ಸಿಕ್ಕಿದಂತಾಗುತ್ತದೆ ಎಂದು ಹೇಳಿದರು.

Tags :
#CTRavibjpchikkamagalurumodiWaqf
Next Article