ಉತ್ತರಕಾಶಿ ಸುರಂಗ ಕುಸಿತ: 6ನೇ ದಿನವೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಉತ್ತರಕಾಶಿ: ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದ ಪರಿಣಾಮ ಅದರಲ್ಲಿ ಸಿಲುಕಿರುವ 40 ಕಾರ್ವಿುಕ ರಕ್ಷಣಾ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆ ಶುಕ್ರವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು, ರಕ್ಷಣಾ ಕಾರ್ಯ ಪೂರ್ಣಗೊಳ್ಳಲು ಇನ್ನೂ 2-3 ದಿನಗಳು ತಗುಲಬಹುದು ಅಂದಾಜು ಮಾಡಲಾಗಿದೆ. ನವೆಂಬರ್ 12 ರಿಂದ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 40 ಕಾರ್ಮಿಕರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸಚಿವ ವಿಕೆ ಸಿಂಗ್ ಹೇಳಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದೇನೆ ಅವರು ಸುರಕ್ಷಿತವಾಗಿದ್ದಾರೆ ಎಂದರು. ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತಗೊಂಡಿದ್ದು, 40 ಕಾರ್ಮಿಕರು ಒಳಗೆ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಶುಕ್ರವಾರ ಆರನೇ ದಿನಕ್ಕೆ ಕಾಲಿಟ್ಟಿದ್ದು, ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ಕಾಯುವಿಕೆ ಮುಂದುವರೆದಿದೆ. ಮಂಗಳವಾರ ಭೂ ಕುಸಿತ ಉಂಟಾದ ಕಾರಣ ರಕ್ಷಣಾ ಕಾರ್ಯ ವಿಳಂಬವಾಗಿತ್ತು, ಇದೀಗ ದೆಹಲಿಯಿಂದ ಹೊಸ ಯಂತ್ರವನ್ನು ತರಿಸಿಕೊಳ್ಳಲಾಗಿದ್ದು, ಕಾರ್ಮಿಕರ ರಕ್ಷಣೆಗೆ ಇನ್ನೂ 2-3 ದಿನಗಳು ತಗುಲಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 900 ಮಿಮೀ ವ್ಯಾಸದ ಉಕ್ಕಿನ ಕೊಳವೆಗಳನ್ನು ಕೊರೆದು, ಕಾರ್ವಿುಕರು ಇರುವ ಸ್ಥಳವನ್ನು ಸಂರ್ಪಸಲಾಗುತ್ತದೆ. ನಂತರ ಕಾರ್ವಿುಕರು ಈ ಕೊಳವೆ ಮೂಲಕ ತೆವಳಿಕೊಂಡು ಸುರಂಗದ ಹೊರಗೆ ಬರಬೇಕು. ಸುರಂಗದಿಂದ ರಕ್ಷಿಸಲ್ಪಡುವ ಕಾರ್ವಿುಕರಿಗಾಗಿ ಆರು ಹಾಸಿಗೆಗಳ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಸುರಂಗದ ಹೊರಗೆ ತಜ್ಞ ವೈದ್ಯರೊಂದಿಗೆ 10 ಆಂಬುಲೆನ್ಸ್ ಗಳನ್ನು ಇರಿಸಲಾಗಿದೆ. ಕಾರ್ವಿುಕರು ಹೊರಬಂದ ತಕ್ಷಣ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.