For the best experience, open
https://m.samyuktakarnataka.in
on your mobile browser.

ಸ್ವರ್ಣವಲ್ಲೀ ಮಠದ ಉತ್ತರಾಧಿಕಾರಿ ನೇಮಕ

01:03 AM Dec 30, 2023 IST | Samyukta Karnataka
ಸ್ವರ್ಣವಲ್ಲೀ ಮಠದ ಉತ್ತರಾಧಿಕಾರಿ ನೇಮಕ

ಶಿರಸಿ: ತಾಲೂಕಿನ ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ೫೪ ನೇ ಪೀಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಶ್ರೀಮಠಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಶಿಷ್ಯ ಸ್ವೀಕಾರ ಮಾಡಲು ನಿರ್ಣಯಿಸಿದ್ದಾರೆ.
ಸ್ವರ್ಣವಲ್ಲೀ ಶ್ರೀಗಳವರ ಅಪೇಕ್ಷೆ ಮತ್ತು ಆದೇಶದಂತೆ ಜ್ಯೋತಿಷಿಗಳ ಸಲಹೆಯನ್ನು ಪಡೆದು ಯಲ್ಲಾಪುರ ತಾಲೂಕಿನ ಈರಾಪುರದ ವಿದ್ವಾನ್ ನಾಗರಾಜ ಭಟ್ಟ ಅವರನ್ನು ಪರಮಪೂಜ್ಯ ಶ್ರೀಗಳವರ ಶಿಷ್ಯರನ್ನಾಗಿ ಸ್ವೀಕರಿಸಲು ಇತ್ತೀಚೆಗೆ ನಡೆದ ಶ್ರೀಮಠದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಶಿಷ್ಯ ಸ್ವೀಕಾರದ (ಸಂನ್ಯಾಸಾಶ್ರಮ ಸ್ವೀಕಾರದ) ಕಾರ್ಯಕ್ರಮಗಳು ಮಾಘ ಶುದ್ಧ ತ್ರಯೋದಶಿ ೨೦೨೪ ಫೆಬ್ರವರಿ ೨೨ ರಂದು ನಡೆಯಲಿವೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವರ್ಣವಲ್ಲೀ ಮಠದಲ್ಲೇ ಕಳೆದ ಒಂದು ದಶಕಗಳಿಂದ ವೇದಾಧ್ಯಯನ ನಡೆಸಿ, ಇದೀಗ ವೇದಾಂತ ಶಾಸ್ತ್ರ ಅಧ್ಯಯನ ಮಾಡುತ್ತಿರುವ ನಾಗರಾಜ್ ಭಟ್ಟ ಅವರು ಮೂಲತಃ ಈರಾಪುರ ಗಂಗೆಮನೆಯ ಕೃಷಿ ಕುಟುಂಬದ ಗಣಪತಿ ಭಟ್ಟ ಹಾಗೂ ಭುವನೇಶ್ವರಿ ದಂಪತಿಗಳ ಪ್ರಥಮ ಪುತ್ರರಾಗಿದ್ದಾರೆ.
ವಿ.ನಾಗರಾಜ ಭಟ್ಟ ಅವರಿಗೆ ಮೊದಲಿಂದಲೂ ಆಧ್ಯಾತ್ಮದ ಆಸಕ್ತಿ ಹೊಂದಿದ್ದರು. ಅವರ ಸಹೋದರ ಉಡುಪಿಯಲ್ಲಿ ಜೋತಿಷ್ಯ ಶಾಸ್ತç ಅಧ್ಯಯನ ನಡೆಸುತ್ತಿದ್ದಾರೆ.