For the best experience, open
https://m.samyuktakarnataka.in
on your mobile browser.

ಉಪಚುನಾವಣೆ ರಾಜ್ಯದ ದಿಕ್ಸೂಚಿ ಬದಲಿಸಲಿದೆ

11:49 AM Oct 25, 2024 IST | Samyukta Karnataka
ಉಪಚುನಾವಣೆ ರಾಜ್ಯದ ದಿಕ್ಸೂಚಿ ಬದಲಿಸಲಿದೆ

ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ದಿಕ್ಸೂಚಿ ಬದಲಿಸಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸಂಡೂರಿನಲ್ಲಿ‌ ವಿಜಯಪ್ಯಾಲೇಸ್ ಹೋಟೆಲ್‌ನಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಶಿಗ್ಗಾಂವಿ ಚನ್ನಪಟ್ಟಣದಲ್ಲಿ ಸಂಡೂರುನಲ್ಲಿ ನಾಮಪತ್ರ ಸಲ್ಲಿಕೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಂದ ನಂತ್ರ ಪ್ರಮುಖ ಮೂರು ಉಪ ಚುನಾವಣೆ ಇವಾಗಿವೆ. ಸರ್ಕಾರ ಆಡಳಿತ ವಿರೋಧ ಅಲೆ ಎದುರಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಜನರು ಹಾದಿಯಲ್ಲಿ ಬೀದಿಯಲ್ಲಿ ಮಾತನಾಡ್ತಾ ಇದ್ದಾರೆ. ಸಾಲು ಸಾಲು ಹಗರಣಗಳನ್ನ ಬಿಜೆಪಿ ಬಯಲಿಗೆ ತಂದಿದೆ. ಮೈಸೂರಿನ ಮುಡಾ ಹಗರಣದಲ್ಲಿ ಸಿಎಂ ತಪ್ಪು ಒಪ್ಪಿಕೊಂಡಿದ್ದಾರೆ. ೧೪ ಸೈಟು ವಾಪಸ್ಸು ನೀಡಿ ತಪ್ಪು ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಕ್ರಮ ನಡೆದಿಲ್ಲ ಅಂತಾ ಸಿಎಂ ಹೇಳಿದ್ದರು. ಆದರೆ ಸದನದಲ್ಲಿ 87 ಕೋಟಿ ಹಗರಣ ಆಗಿದೆ ಅಂತಾ ಸಿಎಂ ಒಪ್ಪಿಕೊಂಡಿದ್ದಾರೆ. ಸರ್ಕಾರದ ವಿರುದ್ದ ಜನರು ಛೀ ಥೂ ಅಂತಾ ಉಗಿಯುತ್ತಿದ್ದಾರೆ.‌ ಹಿಂದು ಸಮಾಜ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಸಿಎಂ ಮಾಡ್ತಾ ಇದ್ದಾರೆ. ಗ್ಯಾರೆಂಟಿ ಯೋಜನೆ ಹೆಸರಿನಲ್ಲಿ ಚುನಾವಣೆ ಮಾಡ್ತಾ ಇದ್ದಾರೆ. ಲೋಕಸಭಾ ಚುನಾವಣೆ ಮುನ್ನ ಜನರ ಖಾತೆಗಳಿಗೆ ಹಣ ಹಾಕಿತು. ಆದರೆ 18-20 ಗೆಲ್ಲುತ್ತೀವಿ ಅಂತಾ ಕಾಂಗ್ರೆಸ್ ನಾಯಕರು ಬಡಾಯಿ ಕೊಚ್ಚಿಕೊಂಡರು ಆದರೆ ಬಿಜೆಪಿ, ಜೆಡಿಎಸ್‌ಗೆ ಹೆಚ್ಚು ಸ್ಥಾನ ಲೋಕಸಭೆ ಚುನಾವಣೆಯಲ್ಲಿ ಬಂದವು. ರಾಜ್ಯಕೀಯ ದಿಕ್ಕನ್ನ ಈ ಉಪ ಚುನಾವಣೆ ಬದಲಾವಣೆ ಮಾಡ್ತಾ ಇವೆ. ಇದು ರೈತರ ವಿರೋಧಿ ಸರ್ಕಾರ ಬರ ನೆರೆ ಬಂದ್ರೂ ಸರ್ಕಾರದ ಸ್ಪಂದನೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಬಡವರ ರೈತರ ವಿರೋಧಿ ಸರ್ಕಾರ. ಹಿಂದುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ ವಿಜಯೇಂದ್ರ ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ ಶಾಸಕರು ತಲೆ ಎತ್ತಿ ತಿರುವಂತಿಲ್ಲ. ಮೂರು ಮತ ಕ್ಷೇತ್ರಗಳಲ್ಲಿ ನಮ್ಮ ಗೆಲುವು ನಿಶ್ಚಿತ. ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ. ಶ್ರೀರಾಮುಲು ಅವರಿಗೆ ಅಸಮಾಧಾನ ಇಲ್ಲ. ಮೂರು ಕ್ಷೇತ್ರಗಳ ಫಲಿತಾಂಶ ಬಳಿಕ ಕಾದು ನೋಡಿ ಎಂದ ವಿಜಯೇಂದ್ರ ಯೋಗಿಶ್ವರ ಬಗ್ಗೆ ನಾವು ಚರ್ಚೆ ಮಾಡಲು ಅವಶ್ಯಕತೆ ಇಲ್ಲ ಎಂದರು. ಬೆಲೆಕೇರೆ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ತನ್ನ ತೀರ್ಪು ನೀಡಿದೆ. ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಿದೆ ಎಂದರು.

Tags :