ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಉಳಿದ ಜಮೀನಿನಲ್ಲೇ ನೀಡಬಹುದಿತ್ತು

05:17 PM Aug 07, 2024 IST | Samyukta Karnataka

ಜಮೀನಿನ ಪಕ್ಕದಲ್ಲಿ ಸುಮಾರು 4 ಎಕರೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದೆ.

ಮಂಡ್ಯ: ಭ್ರಷ್ಟ ಮುಖ್ಯಮಂತ್ರಿಗಳು ಕೋಟಿ ಕೋಟಿ ಬೆಲೆ ಬಾಳುವ ಸೈಟುಗಳನ್ನು ಕಬಳಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ 40 ವರ್ಷಗಳ ರಾಜಕೀಯದಲ್ಲಿ ಕ್ಲೀನ್‌ ಎಂದು ಹೇಳಿ, ಕ್ಲೀನ್‌ ಆಗಿ 14 ಸೈಟುಗಳನ್ನು ನುಂಗಿದ್ದಾರೆ. ಈ ಹಿಂದೆ ರೀಡು ಪ್ರಕರಣದಲ್ಲಿ ಕೆಂಪಣ್ಣ ಆಯೋಗ ನೇಮಿಸಿ ಆರು ವರ್ಷ ಕಳೆದರೂ ವರದಿ ಬರಲಿಲ್ಲ. ಅದೇ ತಂತ್ರವನ್ನು ಪ್ರಯೋಗಿಸಿ ದೇಸಾಯಿ ಆಯೋಗ ರಚಿಸಿದ್ದು, ಇದಕ್ಕೆ 60 ವರ್ಷ ಅವಧಿ ನೀಡುತ್ತಾರಾ, ಸಿದ್ದರಾಮಯ್ಯ ಅವರು ತಮ್ಮ ಶ್ರೀಮತಿ ಹೆಸರಿನಲ್ಲಿ ಕುಂಕುಮ ರೂಪದಲ್ಲಿ ಪಡೆದಿರುವ ಜಮೀನಿನ ಪಕ್ಕದಲ್ಲಿ ಸುಮಾರು 4 ಎಕರೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದೆ. ಅದರಲ್ಲಿ ಕೇವಲ 10 ಗುಂಟೆ ಮಾತ್ರ ಡಿನೋಟಿಫೈ ಮಾಡಿರುವ ಮುಡಾ, ಉಳಿದ ಜಮೀನನ್ನು ತನ್ನಲ್ಲೇ ಉಳಿಸಿಕೊಂಡಿದೆ. ಉಳಿದ ಜಮೀನಿನಲ್ಲೇ ಸಿದ್ದರಾಮಯ್ಯನವರಿಗೆ ನೀಡಬಹುದಿತ್ತು. ಆದರೆ, ಸ್ವಜನಪಕ್ಷಪಾತದಿಂದ ತಮ್ಮ ಪ್ರಭಾವ ಬಳಿಸಿ ಭ್ರಷ್ಟ ಮುಖ್ಯಮಂತ್ರಿಗಳು ಕೋಟಿ ಕೋಟಿ ಬೆಲೆ ಬಾಳುವ ಸೈಟುಗಳನ್ನು ಕಬಳಿಸಿದ್ದಾರೆ ಎಂದರು.

Tags :
#Bjp#BJPJDSPadayatre#cmsiddaramaiah#MUDAScamcongress
Next Article