For the best experience, open
https://m.samyuktakarnataka.in
on your mobile browser.

ಊಟ ಬಿಟ್ಟು ಉಪ್ಪಿನಕಾಯಿ ಕೊಟ್ಟಿದ್ದಾರೆ

12:31 PM Apr 27, 2024 IST | Samyukta Karnataka
ಊಟ ಬಿಟ್ಟು ಉಪ್ಪಿನಕಾಯಿ ಕೊಟ್ಟಿದ್ದಾರೆ

ಧಾರವಾಡ: ರಾಜ್ಯದಲ್ಲು ಬರಗಾಲವಿದೆ ಎಂದು ಮನವರಿಕೆ ಮಾಡಿದರೂ ಕೇಳದ ಕೇಂದ್ರ ಸರಕಾರ ಈಗ ನ್ಯಾಯಾಲಯದ ನಿರ್ದೇಶನದಿಂದ ಪರಿಹಾರ ಬಿಡುಗಡೆ ಮಾಡಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಕ್ಕೆ ಬರ ಅಧ್ಯಯನ ತಂಡ ಬಂದು ಹೋದ ತಕ್ಷಣ ನಾವು ೧೮,೧೭೨ ಕೋಟಿ ಬರ ಪರಿಹಾರ ಕೇಳಿದ್ದೇವು. ಆದರೆ, ಮೂರು ದಿನಗಳಲ್ಲಿ ನೀಡುವುದಾಗಿ ಹೇಳಿ ಕೈಚೆಲ್ಲಿ ಕುಳಿತಿದ್ದರು ಎಂದು ದೂರಿದರು.
ಕೇಂದ್ರದ ನಡೆ ಖಂಡಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಸದ್ಯ ನ್ಯಾಯಾಲಯದ ನಿರ್ದೇಶನದ ಪ್ರಕಾರ ೩೪೫೪ ಕೋಟಿ ನೀಡಿದ್ದಾರೆ. ಇದು ಒಂದು ರೀತಿ ಊಟವಿಲ್ಲದೇ ಉಪ್ಪಿನಕಾಯಿ ನೀಡಿದಂತಾಗಿದೆ ಎಂದು ಆರೋಪಿಸಿದರು.
ಕೂಡಲೇ ಬಾಕಿ ಪರಿಹಾರವನ್ನೂ ಸರಕಾರ ನೀಡಬೇಕು. ಇಲ್ಲದಿದ್ದರೆ ನಾವು ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ ಎಂದರು.