For the best experience, open
https://m.samyuktakarnataka.in
on your mobile browser.

ಎಂಪಿ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ

05:36 PM Mar 04, 2024 IST | Samyukta Karnataka
ಎಂಪಿ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ

ವಿಜಯಪುರ: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸ್ವೀಕಾರ ಮಾಡಿರುವುದರಿಂದ ಸರಕಾರ ಪತನವಾಗಲಿದೆ. ೫೦-೬೦ ಶಾಸಕರಿಂದ ಸರಕಾರ ಬೀಳಲಿದೆ. ಈ ಸರಕಾರ ಬಹಳ ದಿನ ಮುಂದೆವರೆಯುವುದಿಲ್ಲ ಎಂದರು.
ಜಾತಿ ಗಣತಿ ಸ್ವಿಕಾರ ವಿಚಾರವಾಗಿ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ಸಿನ ಶಾಸಕರಾದ ಶಾಮನೂರ ಶಿವಶಂಕ್ರಪ್ಪ, ವಿನಯ ಕುಲಕರ್ಣಿ, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಮಧು ಬಂಗಾರಪ್ಪ ಅವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರಕಾರ ಪತನ ನಿಶ್ಚಿತವಾಗಿದೆ ಎಂದು ಅವರು ಭವಿಷ್ಯ ನುಡಿದರು.
ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಬಹುತೇಕ ಜನರ ಮನೆಗೆ ಹೋಗದೇ ವರದಿ ತಯಾರಿಸಲಾಗಿದೆ. ಮತ್ತೋಮ್ಮೆ ಸಮೀಕ್ಷೆ ನಡೆಸಬೇಕು. ಇದೇ ನೆಪದಲ್ಲಿ ಸರಕಾರ ಪತನವಾಗಲಿ ಎಂಬುದು ಅವರ ಮನಸ್ಸಿನಲ್ಲಿರಬೇಕು. ಈ ಜಾತಿ ವರದಿ ಸ್ವೀಕಾರ ಮಾಡಿದ್ದನ್ನು ಯಾವುದೇ ಪರಿಸ್ಥಿತಿಯಲ್ಲಿ ಸರಕಾರ ಒಪ್ಪಬಾರದು. ಒಂದು ವೇಳೆ ಒಪ್ಪಿದರೆ ಕರ್ನಾಟಕದಲ್ಲಿ ಬಹಳ ದೊಡ್ಡ ಅನಾಹುತ ಉಂಟಾಗಲಿದೆ ಎಂದರು.