ಎಚ್ಚರ... 𝐀𝐏𝐊 ಫೈಲ್ ತರಬಹದು ಸೈಬರ್ ಆಪತ್ತು
ಬೆಂಗಳೂರು: ನಕಲಿ ವಾಟ್ಸಾಪ್ ನಂಬರ್ ನಿಂದ ಬರುವ 𝐀𝐏𝐊 & ಫೈಲ್ ಗಳನ್ನು ಡೌನ್ಲೋಡ್ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ತಿಳಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಾಮಾನ್ಯ ಸೇವಾ ಕೇಂದ್ರ(Common Service Centre) ಹೆಸರಿನ ಸರ್ಕಾರಿ ಸೇವಾ ಪೋರ್ಟಲ್ ಎಂದು ಬಿಂಬಿಸಿ, ನಕಲಿ ವಾಟ್ಸಾಪ್ ನಂಬರ್ ನಿಂದ ಬರುವ 𝐀𝐏𝐊 & ಫೈಲ್ ಗಳನ್ನು ಡೌನ್ಲೋಡ್ ಮಾಡಬೇಡಿ.ನಿಮ್ಮ ಮೊಬೈಲ್ ಡೇಟಾ ಕಳ್ಳತನ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಾರೆ ಎಚ್ಚರ!!! ಸೈಬರ್ ಕ್ರೈಮ್ ವಂಚನೆಗೆ ಒಳಗಾದರೆ ಕೂಡಲೇ 𝟭𝟵𝟯𝟬 ಗೆ ಕರೆ ಮಾಡಿ ಎಂದಿದ್ದಾರೆ.
ನಕಲಿ ನಂಬರ್‌ನಿಂದ ಬರುವ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಅಥವಾ ಯಾವುದೇ ಅಪ್ಲಿಕೇಶನ್‌ಗಳು ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದೆ.
ಸೈಬರ್ ಕ್ರಿಮಿನಲ್‌ಗಳು ಗ್ರಾಹಕರನ್ನು ವಂಚಿಸಲು ಹೊಸ ವಿಧಾನವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ, ಪ್ರಾಥಮಿಕವಾಗಿ ನಕಲಿ ಎಪಿಕೆ ಲಿಂಕ್‌ಗಳನ್ನು ಕಳಿಸುತ್ತಾರೆ.
APK ಎಂದರೆ Android ಅಪ್ಲಿಕೇಶನ್ ಪ್ಯಾಕೇಜ್. APK ಎನ್ನುವುದು Android ಆಪರೇಟಿಂಗ್ ಸಿಸ್ಟಮ್‌ನಿಂದ ಸಾಧನಗಳಲ್ಲಿ ಅಪ್ಲಿಕೇಶನ್‌ಗಳನ್ನು ವಿತರಿಸಲು ಮತ್ತು ಸ್ಥಾಪಿಸಲು ಬಳಸುವ ಅಪ್ಲಿಕೇಶನ್ ಫೈಲ್ ಫಾರ್ಮ್ಯಾಟ್ ಆಗಿದೆ.