For the best experience, open
https://m.samyuktakarnataka.in
on your mobile browser.

ಎನ್ ಕೌಂಟರ್ ಕಾನೂನು ಬರಲೇಬೇಕು: ಸಚಿವ ಲಾಡ್

11:32 AM Apr 19, 2024 IST | Samyukta Karnataka
ಎನ್ ಕೌಂಟರ್ ಕಾನೂನು ಬರಲೇಬೇಕು  ಸಚಿವ ಲಾಡ್

ಹುಬ್ಬಳ್ಳಿ: ವಿದ್ಯಾರ್ಥಿನಿಯ ಬರ್ಬರ ಕೊಲೆಯಂತಹ ಘಟನೆಆಗಬಾರದು. ಈ ಕೊಲೆಯನ್ನು ನಾನು ಖಂಡನೆ ಮಾಡುತ್ತೇನೆ. ಇಂತಹ ಪ್ರಕರಣದಲ್ಲಿ ಎನ್ ಕೌಂಟರ್ ಕಾನೂನು ಬರಲೇಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿದ ಅವರು, ಕುಟುಂಬದವರಿಗೆ ಸಾಂತ್ವನ ನೀಡಿದ ನಂತರ ಮಾತನಾಡಿದರು.
ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳುವುದಿಲ್ಲ.‌ಆದರೆ ಮುಂದೆ ಇದಕ್ಕೆ ಒಂದು ಎನಕೌಂಟರ್ ಕಾನೂನು ಬರಲೇಬೇಕು ಎಂದರು.
ಡ್ರಗ್ಸ್ ಮಾಫೀಯಾ ಬಹಳ ದಿನದಿಂದ ಇದೆ. ಡ್ರಗ್ಸ್ ಬೇರೆ ಬೇರೆ ಕಡೆಯಿಂದ ಬರುತ್ತದೆ. ಇದು ಕೇವಲ ರಾಜ್ಯದ ಸಮಸ್ಯೆಯಲ್ಲ. ಎಲ್ಲಿ ಸರಬರಾಜು ಆಗುತ್ತದೆ ಅದನ್ನ ತಡೆಯಬೇಕು. ಈಗ ಆಗಿರುವ ಘಟನೆಗೆ ಅದಕ್ಕೂ ಹೋಲಿಕೆ ಬೇಡ ಎಂದರು.
ಎನ್ ಕೌಂಟರ್ ಕಾನೂನು ಮಾಡಿದರೆ ಈ ರೀತಿ ಮಾಡುವವರನ್ನು ಹೊಡೆದು ಉರುಳಿಸಬಹುದು.
ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಸರ್ಕಾರಗಳ ಅವಧಿಯಲ್ಲಿ ಘಟನೆಗಳ ಸಂಖ್ಯೆಗಳನ್ನು ಕೊಡಬಲ್ಲೆ, ಆದರೆ ಅದಕ್ಕೆ ಉತ್ತರಿಸುವ ಪರಿಸ್ಥಿತಿ ಇದಲ್ಲ.
ಕೆಲವರು ಇದನ್ನ ರಾಜಕೀಯ ಮಾಡಲು ಹೊರಟಿದ್ದಾರೆ. ಅವರಿಗೆ ಏನು ಅಂತಾ ಹೇಳಲಿ, ಇಂತಹ ಸೂಕ್ಷ್ಮ ವಿಷಯಗಳಲ್ಲಿ ರಾಜಕೀಯಗೊಳಿಸದೇ ಸೂಕ್ಷ್ಮತೆ, ಸ್ವಯಂತೆ ಕಾಯ್ದುಕೊಳ್ಳಬೇಕು ಬಿಜೆಪಿಗರಿಗೆ ಕಿವಿ ಮಾತು ಹೇಳಿದರು‌.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ೧೩.೩೦ ಲಕ್ಷ ಯುವತಿಯರು ಮಹಿಳೆಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಜೋಶಿ ಉತ್ತರಿಸಿಲಿ. ಹುಬ್ಬಳ್ಳಿ ಘಟನೆ ರಾಜಕರಣಗೊಳಿಸುತ್ತಿರುವ ಬಿಜೆಪಿಯವರು, ಬೆಂಗಳೂರು ಘಟನೆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಘಟನೆಯನ್ನು ಬೇರೆ ಆಯಾಮದಲ್ಲಿ ನೋಡಬಾರದು. ತನಿಖೆ ಮುಗಿಯದೇ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲವೇ, ಅಂಕೆ ಸಂಖ್ಯೆ ಕೊಡಲೇ ಎಂದು ತಿರುಗೇಟು ನೀಡಿದರು. ತನಿಖೆ ಬಗ್ಗೆ ಈಗ ಮಾತನಾಡುವುದಿಲ್ಲ ಎಂದರು.
ಘಟನೆ ಆಕಸ್ಮಿಕ ಎಂಬ ಗೃಹಸಚಿವರ ಹೇಳಿಕೆಯನ್ನು ಸಚಿವ ಲಾಡ್ ಸಮರ್ಥಿಸಿಕೊಂಡರು.