For the best experience, open
https://m.samyuktakarnataka.in
on your mobile browser.

ಎಫ್‌ಐಅರ್ ದಾಖಲಿಸಿದರೆ ಸಾಲದು…

01:22 PM Sep 17, 2024 IST | Samyukta Karnataka
ಎಫ್‌ಐಅರ್ ದಾಖಲಿಸಿದರೆ ಸಾಲದು…

ತುಮಕೂರು: ಗಣೇಶನನ್ನು ಬಿಡಲು ಅಡ್ಡಿಪಡಿಸುವವರ ವಿರುದ್ಧ ಎಫ್‌ಐಅರ್ ದಾಖಲಿಸಿದರೆ ಸಾಲದು ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನಾಗಮಂಗಲ ಗಲಭೆಯಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆ ಭಾಗಿಯಾಗಿದೆ ಎಂಬ ವಿಚಾರ‌ ಸಂಬಂಧ
ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾನ್ ಮಾಡಿದರೂ ಸ್ವತಂತ್ರ್ಯವಾಗಿ ಓಡಾಡಿಕೊಂಡಿದ್ದಾರೆ. ಗಣೇಶನನ್ನು ಬಿಡಲು ಅಡ್ಡಿ ಪಡಿಸುತ್ತಾರೆ ಎಂದರೆ ಏನು ಹೇಳಬೇಕು, ಇಂತವರ ವಿರುದ್ಧ ಬರಿ ಎಫ್ ಐ ಆರ್ ಆದರೆ ಸಾಕಾಗಲ್ಲ.ಕಠಿಣವಾದ ಶಿಕ್ಷೆಯಾಗಬೇಕು ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು. 2023ರಲ್ಲಿ ಇದೇ ತರಹ ಘಟನೆ ನಡೆದಿತ್ತು. ಇದು ಮತ್ತೆ ಮರುಕಳಿಸಿದೆ, ಇದರ ಉದ್ದೇಶ ಏನೆಂದರೆ ಪ್ರತಿಕಾರ. ಬಿಜೆಪಿ ಸರ್ಕಾರ ಇದ್ದಾಗ ಉಸಿರೆತ್ತಲ್ಲ . ಕಾಂಗ್ರೆಸ್ ಬಂದಾಗ ಯಾಕೆ ಆಗುತ್ತದೆ. ಗೃಹ ಸಚಿವ ಪರಮೇಶ್ವರ ಒಬ್ಬ ದಕ್ಷ ಅನುಭವಿ ರಾಜಕಾರಣಿಯಾಗಿದ್ದು ಅವರು ನಿಯಂತ್ರಣ ಮಾಡುತ್ತಾರೆ ಎಂದರು.

ಹಾಲಿನ ದರ ಹೆಚ್ಚಳ : ಹಾಲಿನ ದರ ಏರಿಕೆ ವಿಚಾರ ಸಂಬಂಧ ಮಾತನಾಡಿ, ಹಾಲಿನ ದರ ಹೆಚ್ಚಳ ಮಾಡಿ ನೂರಕ್ಕೆ ನೂರು ಪರ್ಸೆಂಟ್ ರೈತರಿಗೆ ಕೊಡುವುದಾದರೆ ನಮ್ಮದೇನು ಅಭ್ಯಂತರ ಇಲ್ಲ. ರೈತರ ಹೆಸರಲ್ಲಿ ಇನ್ನೆನೋ ಮಾಡಿಕೊಂಡು ಅದನ್ನು ಭಾಗ್ಯಗಳಿಗೆ ಉಪಯೋಗಿಸಿ ಕೊಳ್ಳೊದಾದರೆ ಅದು ಸರಿಯಲ್ಲ ಎಂದರು.

ಅವತ್ತಿನ ಸಿದ್ದರಾಮಯ್ಯನೇ ಬೇರೆ ಇವತ್ತಿನ ಸಿದ್ದರಾಮಯ್ಯನೇ ಬೇರೆ: ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದಕ್ಕೆ ಆಗುತ್ತಿಲ್ಲ. ಏನೋ ಒಂದು ಹೇಳುತ್ತಾರೆ ಅದನ್ನು ಸರಿ ಮಾಡಿಕೊಳ್ಳುವುದರಲ್ಲಿ ಇನ್ನೊಂದು ಶುರುವಾಗುತ್ತದೆ. ಸಿದ್ದರಾಮಯ್ಯ ಅನುಭವ ಐದು ವರ್ಷದಲ್ಲಿ ಯಾವ ರೀತಿ ಬಳಕೆ ಆಯಿತೋ ಮುಂದೇ ಅದೇ ತರಹ ಆಗಬೇಕು. ಒಂದೂವರೆ ವರ್ಷದಲ್ಲಿ ಸರ್ಕಾರ ಎಲ್ಲಿದೆ ಅಂತ ಹುಡುಕಾಡುವ ಹಾಗೆ ಆಗಿದೆ ಎಂದರು. ಅವತ್ತಿನ ಸಿದ್ದರಾಮಯ್ಯನೇ ಬೇರೆ ಇವತ್ತಿನ ಸಿದ್ದರಾಮಯ್ಯನೇ ಬೇರೆ. ಜನಪರ ಕಾರ್ಯಕ್ರಮಗಳಿಗೆ ದಕ್ಕಯಾಗುತ್ತಿದೆ. ಸಾಮಾನ್ಯ ಜನರಲ್ಲಿ ಗೊಂದಲ ಉಂಟಾಗಿದೆ. ಸವಲತ್ತುಗಳು ಏನು ತಲುಪುತ್ತದ್ದವೋ ಅದಕ್ಕೆ ಅನಾನುಕೂಲ ಆಗಿದೆ. ವಾಸ್ತವಾಂಶಕ್ಕೆ ಆದ್ಯತೆ ಕೊಡಿ, ಅದರ ಪ್ರಕಾರ ಸರ್ಕಾರ ನಡೆಸಿ ಎಂದರು.

ಅನುದಾನ ನಿಲ್ಲಿಸಿಲ್ಲ: ಸ್ವಚ್ಚತಾ ಆಂದೊಲನದಲ್ಲಿ 60% ನಾವು ಕೊಡುತ್ತೇವೆ, 40% ನೀವು ಕೊಡುತ್ತೀರಾ. ಕೇಂದ್ರ ಸರ್ಕಾರ ಒಂದೇ ಒಂದು ಅನುದಾನ ನಿಲ್ಲಿಸಿಲ್ಲ. ಎಲ್ಲೋ ಒಂದು ಎರಡು ಕಡೆ ತೊಂದರೆಯಾಗಿದೆ. ನಾನು ಕೇಂದ್ರದ ಮಂತ್ರಿಯಾಗಿ ಆತ್ಮೀಯನಾಗಿ ವಿನಂತಿ ಮಾಡುತ್ತೇನೆ. ದಯವಿಟ್ಟು ವಾಸ್ತವಾಂಶಗಳನ್ನು ಹೇಳಿ, ನಿಜಾಂಶಗಳನ್ನು ತಿಳಿಸಿ ಎಂದರು.

Tags :