ಎರಡನೇ ಸ್ವಾತಂತ್ರ್ಯ ಹೋರಾಟ 75 ರಲ್ಲೇ ಆಗಿದೆ, ಸಿದ್ದರಾಮಯ್ಯ ಜಾಣ ಮರೆವು ಪ್ರದರ್ಶನ
ಸಂವಿಧಾನ ಮೊಟಕುಗೊಳಿಸುವ ಸಾಹಸಕ್ಕೆ ಯಾರೂ ಕೈ ಹಾಕಬಾರದು ಎನ್ನುವುದನ್ನು ನಮಗೆ 1977 ರ ಚುನಾವಣೆ ಕಲಿಸಿದೆ
ಹುಬ್ಬಳ್ಳಿ : ಸಂವಿಧಾನ ರಕ್ಷಣೆಗೆ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಸಂವಿಧಾನ ರಕ್ಷಣೆಗೆ 1975 ರಲ್ಲಿ ಕಾಂಗ್ರೆಸ್‌ನವರು ಸಂವಿಧಾನ ಮೊಟಕುಗೊಳಿಸಿದಾಗ ಜಯ ಪ್ರಕಾಶ ನಾರಾಯಣ ಅವರು ಸಂಪೂರ್ಣ ಕ್ರಾಂತಿ ಘೋಷಣೆ ಮಾಡಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದಿದೆ ಎಂದು ಹೇಳಿದರು.
ಆ ಮೂಲಕ ಸಂವಿಧಾನ ಹಾಗೂ ಪ್ರಜಾರ್ಪಭುತ್ತ ರಕ್ಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಣ ಮರೆವು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಮಧ್ಯೆ ಸಂವಿಧಾನಕ್ಕೆ ಹಲವಾರು ಸವಾಲುಗಳು ಎದುರಾಗಿರುವುದು ನಮ್ಮ ಇತಿಹಾಸದಲ್ಲಿದೆ. ತುರ್ತು ಪರಿಸ್ಥಿತಿಯ ಕರಾಳ ಛಾಯೆ ನಮ್ಮ ದೇಶದ ಮೇಲಿದೆ. ಎಲ್ಲ ನಾಗರಿಕರ ಹಕ್ಕು, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಿ. ಒಂದು ಲಕ್ಷ ವಿರೋಧ ಪಕ್ಷದವರನ್ನು ಜೈಲಿಗೆ ಹಾಕಿ ತಮ್ಮ ಕುರ್ಚಿ ಉಳಿಸಿಕೊಂಡಿರುವುದನ್ನು ಈ ದೇಶದಲ್ಲಿ ಎಲ್ಲರೂ ನೆನಪಿಟ್ಟಿದ್ದಾರೆ. ಅದು ನಮಗೊಂದು ಪಾಠ, ಮುಂದೆಂದೂಕೂಡ ಸಂವಿಧಾನ ಮೊಟಕುಗೊಳಿಸುವ ಸಾಹಸಕ್ಕೆ ಯಾರೂ ಕೈ ಹಾಕಬಾರದು ಎನ್ನುವುದನ್ನು ನಮಗೆ 1977 ರ ಚುನಾವಣೆ ಕಲಿಸಿದೆ. ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತ್ತು ಸುಪ್ರೀಂ ಕೋರ್ಟ್ ಹಲವಾರು ತೀರ್ಪುಗಳ ಮೂಲಕ ಸಂವಿಧಾನ ರಕ್ಷಣೆ ಮಾಡಿದೆ. ಕೇಶವಾನಂದ "ಭಾರ್ತಿ ಪಕರಣ, ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ ಅವರ ಪ್ರಕರಣ, ಶಾಭಾನು ಪ್ರಕರಣ ಇವೆಲ್ಲವೂ ಪಜಾಪಭುತ್ವ ಉಳಿದರೆ ನಮ್ಮ ಹಕ್ಕುಗಳು ಉಳಿಯುತ್ತವೆ. ಆಗ ದೇಶ ಉಳಿಯುತ್ತದೆ ಎನ್ನುವುದನ್ನು ಎತ್ತಿ ತೋರಿಸಿವೆ. ಅಲ್ಲದೇ ನಮ್ಮ ಹಕ್ಕುಗಳ ಜೊತೆಗೆ ಪ್ರತಿಯೊಬ್ಬರ ನಾಗರಿಕರ ಕರ್ತವ್ಯವೂ ಮುಖ್ಯವಾಗಿದೆ ಎಂದು ಹೇಳಿದರು.