For the best experience, open
https://m.samyuktakarnataka.in
on your mobile browser.

ಎರಡೂ ಗಂಟೆ ಪ್ರಯಾಣಕ್ಕೂ ಊಟದ ಬ್ರೇಕ್: NWKSRTCಲ್ಲೊಂದು ಅಲಿಖಿತ ನಿಯಮ..?

08:39 PM Jul 08, 2024 IST | Samyukta Karnataka
ಎರಡೂ ಗಂಟೆ ಪ್ರಯಾಣಕ್ಕೂ ಊಟದ ಬ್ರೇಕ್  nwksrtcಲ್ಲೊಂದು ಅಲಿಖಿತ ನಿಯಮ

ಬಾಗಲಕೋಟೆ: ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಕೇವಲ ಎರಡೂವರೆ ಗಂಟೆ ಪ್ರಯಾಣವಿದ್ದರೂ ಚಾಲಕರು, ನಿರ್ವಾಹಕರಿಗೆ ತೋಚುವ ದಾಬಾದಲ್ಲಿ ಊಟಕ್ಕೆ ನಿಲ್ಲಲೇಬೇಕು ಇಂಥದೊಂದು ಅಲಿಖಿತ ನಿಯಮ KSRTCಯಲ್ಲಿ ಸದ್ದಿಲ್ಲದೇ ಜಾರಿಯಾಗಿದೆ.

ಊಟದ ಸಮಯವಾಗಿದ್ದರೂ ನಿಲ್ಲಿಸಿರುವುದು ಸೈ ಎಂದು ಒಪ್ಪಬಹುದು ಆದರೆ ಸಂಜೆ ೬ಕ್ಕೆ ಹೊರಟ ಬಸ್ ೮ಗಂಟೆಗೆ ಕೊಣ್ಣೂರ ಬಳಿ ದಾಬಾವೊಂದರಲ್ಲಿ ನಿಲ್ಲುತ್ತೆ ಪ್ರಯಾಣಿಕರು ಹೀಗೇಕೆ ಎಂದು ಪ್ರಶ್ನಿಸಿದರೆ ಅದು ಹಾಗೆ ಎಂಬ ಉತ್ತರ ಬರುತ್ತದೆ. ಮೊದಲೇ ಹೇಳೋದಲ್ಲವೇ ಎಂದು ಪ್ರಶ್ನಿಸಿದರೆ ಏನೆಂದು ಹೇಳಬೇಕೆಂಬ ಮರಳಿ ಪ್ರಶ್ನೆಯೂ ಸಿದ್ಧವಿರುತ್ತದೆ.

ಹುಬ್ಬಳ್ಳಿ-ಬಾಗಲಕೋಟೆ ದೀರ್ಘಮಾರ್ಗದಲ್ಲ.೮ ಗಂಟೆ ಊಟಕ್ಕೆ ನಿಲ್ಲಿಸುವ ಸಮಯವೂ ಅಲ್ಲ. ೯ ಗಂಟೆ ಆಗಿದ್ದರೆ ಊರಿಗೆ ತಲಪಬಹುದು ಆದರೆ ನಿಲ್ಲಿಸಲಬೇಕೆಂಬ ನಿಯಮ ಮಾಡಿಕೊಂಡಿರುವುದರಿಂದ ಬಸ್ಸಿನಲ್ಲಿನ ಪ್ರಯಾಣಕರು ಇಳಿಯದಿದ್ದರೂ ಸಿಬ್ಬಂದಿ ಇಳಿಯುತ್ತಾರೆ.

ಒಂದು ಕಡೆ ತುಂಬಿ ತುಳುಕುತ್ತಿರುವ ಬಸ್ ಗಳಿಂದಾಗಿ ಜನ ಸಂಕಷ್ಟ ಎದುರಿಸಿದರೆ ಮತ್ತೊಂದು ಕಡೆ ಇಂಥ ಅವ್ತವಸ್ಥೆಗಳು ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡುತ್ತಿವೆ.