ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಎರಡೇ ತಿಂಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ವ್ಯವಸ್ಥೆ

06:00 AM Jun 29, 2024 IST | Samyukta Karnataka
ಸಂಕ ವರದಿ ಫಲಶೃತಿ

ಬಾಗಲಕೋಟೆ: ಜಿಲ್ಲೆಯಾಗಿ ೨೫ ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕಾö್ಯನಿಂಗ್ ವ್ಯವಸ್ಥೆ ಇಲ್ಲ ಎಂಬ ಸಂಯುಕ್ತ ಕರ್ನಾಟಕದ ವರದಿಗೆ ಸ್ಪಂದಿಸಿರುವ ಸಚಿವರು ಮುಂದಿನ ಎರಡ್ಮೂರು ತಿಂಗಳೊಳಗಾಗಿ ಅದರ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕಾö್ಯನಿಂಗ್ ವ್ಯವಸ್ಥೆಯಿದ್ದು, ಎಂಆರ್‌ಐ ಘಟಕ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿದೆ ಮುಂಬರುವ ಎರಡ್ಮೂರು ತಿಂಗಳಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿರುವ ಆಸ್ಪತ್ರೆಗಳ ಸೇವೆ ಬಗ್ಗೆ ಶೇ.೮೦ ರಷ್ಟು ತೃಪ್ತಿದಾಯಕವಾಗಿದೆ. ನೂರಕ್ಕೆ ನೂರರಷ್ಟು ಮಾಡುವ ಉದ್ದೇಶದಿಂದ ಎರಡು-ಮೂರು ತಿಂಗಳ ಒಳಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಔಷಧಿ ಹಾಗೂ ಪ್ರಯೋಗಾಲಯ ಎಲ್ಲ ತಪಾಸಣೆಗಳು ಇಲ್ಲಿಯೇ ದೊರೆಯುವಂತೆ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹೊರರೋಗಿ, ಒಳರೋಗಿಗಳ ಸಂಖ್ಯೆ, ವಾರ್ಡಗಳ ಸಂಖ್ಯೆ, ವೈದ್ಯರುಗಳ ಕರ್ತವ್ಯಗಳ ಮೇಲೆ ತೀವ್ರ ನಿಗಾವಹಿಸುವ ಕಾರ್ಯ ಮಾಡಲಾಗುವುದು ಎಂದರು.
ಜಿಲ್ಲೆಯ ಮುಧೋಳ ಹಾಗೂ ಹುನಗುಂದ ತಾಲೂಕಿಗೆ ಎರಡು ಸರಕಾರಿ ತಾಯಿ-ಮಗುವಿನ ಆಸ್ಪತ್ರೆ ಪ್ರಾರಂಭಿಸಲು ಕ್ರಮವಹಿಸಲಾಗುವುದು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುತ್ತಿದೆ. ವೈದ್ಯರು ಹಾಗೂ ತಜ್ಞ ವೈದ್ಯರ ಕೊರತೆ ಜಾಸ್ತಿ ಇದೆ. ಕೌನ್ಸಲಿಂಗ್ ಮೂಲಕ ತಜ್ಞ ವೈದ್ಯರ ಹಾಕಲಾಗುತ್ತಿದೆ. ಕೆಲವು ಜೆಡಿಓ ಆಗಿ ಕೆಲಸ ಮಾಡುತ್ತಿದ್ದು, ಅವರನ್ನು ಸಹ ಮರಳಿ ಕರೆಸಲಾಗುತ್ತಿದೆ. ಅರೇ ವೈದ್ಯಕೀಯ ಸಿಬ್ಬಂದಿಗಳಾದ ನರ್ಸ, ಟೆಕ್ನಿಷಿಯನ್ ಹಾಗೂ ಪಾರ್ಮಾಸಿ ಅಧಿಕಾರಿ ಹುದ್ದೆಗಳು ಸಾಕಷ್ಟು ಖಾಲಿ ಇವೆ. ಹೊರಗುತ್ತಿಗೆ ಮೇಲೆ ಭರ್ತಿಗೆ ಎಫ್‌ಡಿಎನಿಂದ ಅನುಮತಿ ಪಡೆಯಬೇಕಿದೆ. ಆದರೆ ಶೇ.೭೫ ರಷ್ಟು ಗ್ರೂಫ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಗುತ್ತಿಗೆ ಮೇಲೆ ಅವಕಾಶವಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ೫ ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಪ್ರತಿಯೊಂದು ಚಿಕಿತ್ಸೆಗೆ ನಿಗದಿಡಪಸಿದಿ ದರಗಳ ಪಟ್ಟಿಯನ್ನು ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಶಾಸಕ ಎಚ್.ವಾಯ್.ಮೇಟಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಇತರರು ಇದ್ದರು.

Next Article