ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಎಲೆಕ್ಟ್ರಿಕ್ ವಾಹನ ನೋಂದಣಿ: ೩ನೇ ಸ್ಥಾನದಲ್ಲಿ ಕರ್ನಾಟಕ

05:46 AM Apr 03, 2024 IST | Samyukta Karnataka

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಇಂಧನದ ಬದಲು ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇ-ವಾಹನಗಳ (ಇವಿ) ನೋಂದಣಿ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ.
೨೦೨೦-೨೧ ರಿಂದ ೨೦೨೩-೨೦೨೪ ರವರೆಗೆ ರಾಜ್ಯದಲ್ಲಿ ಎಲೆಕ್ಟಿçಕ್ ವಾಹನಗಳ ನೋಂದಣಿ ಯಲ್ಲಿ ಶೇ. ೧,೨೭೫ರಷ್ಟು ಬೆಳವಣಿಗೆಯನ್ನು ಕಂಡಿದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.
೨೦೧೭-೧೮ ರಲ್ಲಿ ೧,೯೨೨ ಇ-ವಾಹನಗಳಿಂದ, ೨೦೨೩-೨೦೨೪ ರಲ್ಲಿ (ಮಾರ್ಚ್ ೨೫ ರವರೆಗೆ) ಸಂಖ್ಯೆ ೧,೫೯,೪೨೮ ಕ್ಕೆ ಏರಿಕೆಯಾಗಿದೆ. ವಾಹನಗಳಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಸೇರಿವೆ. ರಾಜ್ಯದಲ್ಲಿ ಒಟ್ಟು ೩.೪ ಲಕ್ಷ ಇ-ವಾಹನಗಳಿದ್ದು, ೨.೯೮ ಲಕ್ಷ ದ್ವಿಚಕ್ರ ವಾಹನಗಳು, ೨೩,೫೧೬ ನಾಲ್ಕು ಚಕ್ರ ಮತ್ತು ೧೮,೨೪೬ ತ್ರಿಚಕ್ರ ವಾಹನಗಳಿವೆ.
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದಾಗ, ಜನರು ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಇವುಗಳನ್ನು ಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿತ್ತು. ಜನರು ಇ-ವಾಹನಗಳ ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಇಟ್ಟುಕೊಂಡಿರಲಿಲ್ಲ. ಜೊತೆಗೆ ಈ ವಾಹನಗಳನ್ನು ಎಲ್ಲಿ ಚಾರ್ಜಿಂಗ್ ಮಾಡಿಸುವುದು ಎಂಬ ಬಗ್ಗೆ ಗೊಂದಲ ಇದ್ದ ಕಾರಣ ಎಲೆಕ್ಟ್ರಿಕ್ ವಾಹನ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲವಾಗಿದೆ.
೨೦೧೭-೧೮ರಲ್ಲಿ ರಾಜ್ಯದಲ್ಲಿ ಕೇವಲ ೧,೯೨೨ ಎಲೆಕ್ಟ್ರಿಕ್ ವಾಹನಗಳಿದ್ದವು. ಅವುಗಳಲ್ಲಿ ೯೭ ದ್ವಿಚಕ್ರ ವಾಹನಗಳು, ೧,೫೮೯ ತ್ರಿಚಕ್ರ ವಾಹನಗಳು ಮತ್ತು ೨೩೬ ಕಾರುಗಳು ಇದ್ದವು. ಆದರೆ, ಈಗ ಪಟ್ಟಣಗಳು ಮತ್ತು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಮಾರುಕಟ್ಟೆಯಲ್ಲಿ ಅನೇಕ ಇ-ವಾಹನ ಪ್ಲೇಯರ್‌ಗಳು ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿ ಇಂತಹ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ ೨೦೨೩-೨೦೨೪ರಲ್ಲಿ ನೋಂದಣಿಯಾದ ಎಲೆಕ್ಟಿçಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು ೧,೪೦,೩೨೭. ಹೀಗಾಗಿ ಬೈಕ್‌ಗಳೇ ಅಗ್ರಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಕಾರುಗಳಿದ್ದು, ಒಟ್ಟು ೧೩,೬೬೭ ಕಾರುಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, ೫,೪೩೪ ಆಟೋಗಳನ್ನು ನೋಂದಣಿ ಮಾಡಲಾಗಿದೆ.
ರಿಯಾಯ್ತಿಯೇ ಖರೀದಿಗೆ ಕಾರಣ: ಎಲೆಕ್ಟಿçಕ್ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಮುಖ್ಯ ಕಾರಣಗಳೆಂದರೆ ಜನರಲ್ಲಿ ಪರಿಸರ ಕಾಳಜಿ ಮತ್ತು ಕರ್ನಾಟಕ ಸರ್ಕಾರವು ಇಂತಹ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ರಾಜ್ಯದಲ್ಲಿ ೨೫ ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

Next Article