For the best experience, open
https://m.samyuktakarnataka.in
on your mobile browser.

ಎಲ್ಲ ತಿಳಿದುಕೊಳ್ಳಲು ಮೂರನ್ನು ಒತ್ತಿ…

02:32 AM May 07, 2024 IST | Samyukta Karnataka
ಎಲ್ಲ ತಿಳಿದುಕೊಳ್ಳಲು ಮೂರನ್ನು ಒತ್ತಿ…

ಚುನಾವಣೆಯಲ್ಲಿ ಮಿನ್ನ-ಮಿನ್ನ ತರಹದ ಪ್ರಚಾರಗಳು ನಡೆಯುತ್ತಿವೆ. ಒಬ್ಬರು ಒಂದು ಮಾಡಿದರೆ ಇನ್ನೊಬ್ಬರು ಮತ್ತೊಂದು ರೀತಿ ಪ್ರಚಾರ ಮಾಡುತ್ತಿದ್ದರು. ಈ ಬಾರಿ ತಿಗಡೇಸಿಯೂ ಚುನಾವಣೆಗೆ ನಿಂತು ಮಜಮಜಾ ರೀತಿಯಲ್ಲಿ ಪ್ರಚಾರ ಮಾಡಿಸುತ್ತಿದ್ದ. ಎಲ್ಲರೂ ತಿಗಡೇಸಿ ಪ್ರಚಾರದ ವೈಖರಿಗೆ ಮಾರು ಹೋಗುತ್ತಿದ್ದರು. ಕಳೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ನನ್ನನ್ನು ಸಂಚು ಮಾಡಿ ಸೋಲಿಸಿದ್ದ ತಿಗಡೇಸಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪಣತೊಟ್ಟಿದ್ದ ಲಾದುಂಚಿ ರಾಜ… ಹಗಲೂ ರಾತ್ರಿ ಪಾನಕ ಕುಡಿದು ಪ್ಲಾನ್ ಮಾಡುತ್ತಿದ್ದ. ನಾನು ನೇರವಾಗಿ ಅವನಿಗೆ ಓಟು ಹಾಕಬೇಡಿ ಅಂದರೆ ಸುಮ್ಮನೇ ಕೆಟ್ಟ ಹೆಸರು ಬರುತ್ತದೆ. ಹೇಗಿದ್ದರೂ ನಾನು ಸೋಷಿಯಲ್ ಮೀಡಿಯಾ ನೋಡಿ.. ನೋಡಿ ಎಲ್ಲ ಐಡಿಯಾ ಬರುತ್ತಿವೆ. ಇನ್ನೊಂದಿಷ್ಟು ನೋಡಿದರೆ ಪ್ಲಾನ್ ಹೊಳೆಯುತ್ತದೆ ಎಂದು ಅದರಲ್ಲಿ ಬ್ಯಸಿ ಆದ. ಕೊನೆಗೆ ಒಂದು ಆ್ಯಪ್ ಸಿದ್ಧಪಡಿಸಿದ. ಐದಾರು ಸಿಮ್‌ಗಳನ್ನು ಖರೀದಿ ಮಾಡಿದ. ತನ್ನ ಪ್ಲಾನನ್ನು ಯಾರಿಗೂ ಹೇಳಲಿಲ್ಲ. ನನಗೆ ಆಗ ಸಂಚು ಮಾಡಿದ್ದಾನೆ. ಈಗ ನಾನು ಆತನಿಗೆ ಪಂಚು ಹೊಡೆಯದಿದ್ದರೇ ನಾನು ತಿಗಡೇಸಿಯೇ ಅಲ್ಲ ಎಂದು ಮನಸ್ಸಿನಲ್ಲಿ ಹನುಮಂತ ದೇವರಿಗೆ ಹೇಳಿಕೊಂಡ. ಮರುದಿನದಂದೇ ಕಾಮಗಾರಿ ಶುರು ಮಾಡಿದ್ದ….
ಹದಿನೆಂಟು ಮಹಿಳಾ ಸಂಘಟನೆಗಳ ಅಧ್ಯಕ್ಷೆ, ರಾಜಕೀಯ ಮುಖಂಡರ ಪರಿಚಯವಿದ್ದ ಬುಸ್ಯವ್ವನಿಂದಲೇ ಆರಂಭಿಸೋಣ ಎಂದು ತಿಗಡೇಸಿ ಆಕೆಗೆ ತಾನು ತೆಗೆದುಕೊಂಡಿದ್ದ ಹೊಸ ನಂಬರ್‌ನಿಂದ ಕಾಲ್ ಮಾಡಿದ. ಆಕೆ ಫೋನೆತ್ತಿ ಹೇಳಿ ಸ್ವಾಮಿ ಅಂದ ಕೂಡಲೇ
ನಿಮಗೆ ಚುನಾವಣೆ ವಿಷಯ ತಿಳಿದುಕೊಳ್ಳಬೇಕಾದರೆ ಒಂದನ್ನು ಒತ್ತಿ ಅಂದರು ಆಕೆ ಒಂದನ್ನು ಒತ್ತಿದಾಗ… ಎಷ್ಟು ಜನ ನಿಂತಿದ್ದಾರೆ ಎಂದು ತಿಳಿದುಕೊಳ್ಳಲು ಎರಡನ್ನು ಆಕೆ ಎರಡನ್ನು ಒತ್ತಿದಳು… ಓಹೋ.. ಅವರಲ್ಲಿ ಯಾರು ಹೇಗೆ ಎಂದು ತಿಳಿದುಕೊಳ್ಳಲು ಮೂರನ್ನು ಎಂದಾಗ ಆಕೆ ಮೂರನ್ನು ಒತ್ತಿದಳು. ಆ ಕಡೆಯಿಂದ, ಅಯ್ಯೋ…ಅಯ್ಯೋ ನಿಮಗೇನು ಬುದ್ದಿ ಇದೆಯಾ? ಯಾರಿಗಾದರೂ ಓಟು ಹಾಕಿ ಆ ತಿಗಡೇಸಿಗೆ ಮಾತ್ರ ಹಾಕಬೇಡಿ. ಅವನು ರಾತ್ರಿ ಕುರಿ ಕದ್ದಿದ್ದಾನೆ. ಅವನು ಅದು ಮಾಡಿದ್ದಾನೆ. ಇದು ಮಾಡಿದ್ದಾನೆ. ನಿಮಗೆ ಅರಾಮಾಗಿರಬೇಕು ಅಂದರೆ ಅವನನ್ನು ಬಿಟ್ಟು ಯಾರಿಗಾದರೂ ಓಟು ಹಾಕಿ ಎಂದು ಹೇಳತೊಡಗಿದರು. ಬುಸ್ಯವ್ವ ಗಾಬರಿಯಾದಳು. ಇದೇ ರೀತಿ ಎಲ್ಲರಿಗೂ ಕಾಲ್ ಮಾಡುವುದು… ಕಾಲ್‌ನಲ್ಲಿ ಜೋಡಿಸಿಟ್ಟದ್ದು ಹೀಗೆ ಹೇಳುವುದು, ಕೇಳಿಸಿಕೊಂಡವರು ಇನ್ನೊಬ್ಬರಿಗೆ ಹೇಳುವುದು ಹೀಗೆ ನಡದಿತ್ತು. ಈ ಸುದ್ದಿ ತಿಗಡೇಸಿಗೆ ಗೊತ್ತಾಯಿತು. ಆತನೂ ಸುಮ್ಮನಿರಲಿಲ್ಲ. ಕಂಪ್ಯೂಟರ್ ಕಂಬಾರೀಸ್ಯನನ್ನು ಹಿಡಿದು ತಾನೂ ಇಂಥದ್ದೇ ಸಿದ್ದಪಡಿಸಿಕೊಂಡ… ನಂತರ ಎಲ್ಲರಿಗೂ ಕಾಲ್ ಮಾಡಿ… ಕೇಳಿ..ಕೇಳಿ.. ಇದೀಗ ಬಂದ ಸುದ್ದಿ… ಲಾದುಂಚಿರಾಜನಿಗೆ ಹಿಡಿಯಬಾರದ ಹುಚ್ಚು ಹಿಡಿದಿದೆ. ದವಾಖಾನೆಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ. ಕೂಡಲೇ ಹುಚ್ಚಾಸ್ಪತ್ರೆಗೆ ಹಿಡಿದುಕೊಡಿ ಎಂದು ರಿಕಾರ್ಡ್ ಮಾಡಿ ಕೇಳಿಸಿದ. ಮರುಕ್ಷಣವೇ ಲಾದುಂಚಿರಾಜನ ಮನೆಮುಂದೆ ಆಸ್ಪತ್ರೆಯ ವ್ಯಾನು ನಿಂತಿತು. ಆತ ಹಿತ್ತಿಲಬಾಗಿಲಿನಿಂದ ಓಡಿ ಹೋದವನು ಇನ್ನೂ ಪತ್ತೆ ಇಲ್ಲ.