ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಎಷ್ಟು ಎಕರೆಗೆ ನೀರಾವರಿ? ಲೆಕ್ಕಕ್ಕೆ ಪರದಾಡಿದ ಸಿಎಂ

04:24 PM Sep 22, 2024 IST | Samyukta Karnataka

ಕೊಪ್ಪಳ: ತಾಲೂಕಿನ ಮುನಿರಾಬಾದ್ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಭಾನುವಾರ ಅಣೆಕಟ್ಟೆಯ ಕ್ರಸ್ಟ್ ಗೇಟ್-೧೯‌ ಮುರಿದ್ದನ್ನು ಅಳವಡಿಸಲು ಶ್ರಮಿಸಿದವರ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ತುಂಗಭದ್ರಾ ಜಲಾಶಯದಿಂದ ಎಷ್ಟು ಎಕರೆ ನೀರಾವರಿ ಆಗಲಿದೆ? ಎಂಬುದನ್ನು ಹೇಳಲು ಪರದಾಡಿದರು.
ಸಚಿವರಾದ ಶಿವರಾಜ್ ತಂಗಡಗಿ, ಬೋಸರಾಜು, ಶಾಸಕ ಹಂಪನಗೌಡ ಬಾದರ್ಲಿ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸರಿಪಡಿಸಲು ಬಂದರೂ ಆದರೂ, ಕೂಡಾ ಲೆಕ್ಕ ಸರಿಯಾಗಲಿಲ್ಲ. ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಗದರಿಸಿ, ಕಳುಹಿಸಿದರು.
ಕೊನೆಗೆ ಸಿಎಂ ಸಿದ್ದರಾಮಯ್ಯನವರು ಇಲಾಖೆಯ ಅಧಿಕಾರಿಗಳನ್ನು ಕರೆದರು. ಅವರೂ ಕೂಡಾ ಸಮರ್ಪಕ ಅಂಕಿ ಅಂಶ ನೀಡಲಿಲ್ಲ. ಹೇಳುವುದು ಬೇರೆ, ನನಗೆ ಬರೆದುಕೊಟ್ಟ ಅಂಕಿ-ಅಂಶವೇ ಬೇರೆಯೇ ಎಂದು ಗದರಿಸಿದರು. ಬಳಿಕ ಒಂದು ಅಂಕಿ-ಅಂಶ ಅಧಿಕಾರಿಗಳು ಬರೆದುಕೊಟ್ಟರು. ನಂತರ ಕರ್ನಾಟಕದ ಮಾಹಿತಿ ಸರಿ ಇದೆ. ಆದರೆ ಆಂಧ್ರಪ್ರದೇಶ ಎಷ್ಟು ಎಕರೆ ನೀರಾವರಿ ಎನ್ನುವುದನ್ನು ಲೆಕ್ಕಾ ಮಾಡಿ ಹೇಳುತ್ತೇನೆ ಎಂದರು. ಮಾಹಿತಿ ನೀಡಿದ ಅಂಕಿ-ಅಂಶ ಹೇಳಿದ ಸಿಎಂ, ಇದು ತಪ್ಪಾಗಿದ್ದರೆ ಇಂಜಿನಿಯರ್ ಮೇಲೆ ಕ್ರಮ ತೆಗೆದಕೊಳ್ಳುತ್ತೇನೆ ಎಂದರು.

Tags :
#Tungabhadra#TungabhadraDamcmkoppalsiddaramaih
Next Article