For the best experience, open
https://m.samyuktakarnataka.in
on your mobile browser.

ಏಕನಾಥ ಶಿಂಧೆ ಬಣವೇ ನಿಜವಾದ ಶಿವಸೇನೆ

06:55 PM Jan 10, 2024 IST | Samyukta Karnataka
ಏಕನಾಥ ಶಿಂಧೆ ಬಣವೇ ನಿಜವಾದ ಶಿವಸೇನೆ

ಮುಂಬೈ: ಪಕ್ಷದಲ್ಲಿನ ವಿಭಜನೆಯ ನಂತರ ಪರಸ್ಪರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಬಣಗಳು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ತೀರ್ಪು ನೀಡಿದ್ದು, ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯೇ ನಿಜವಾದ ಶಿವಸೇನೆ ರಾಜಕೀಯ ಪಕ್ಷ ಎಂದು ಹೇಳಿದ್ದಾರೆ.
ಶಿವಸೇನಾದಲ್ಲಿ ಒಡಕುವುಂಟಾಗಿ ಎರಡು ಬಣಗಳಾಗಿ ವಿಭಜನೆ ಆದ 18 ತಿಂಗಳ ನಂತರ ಸ್ಪೀಕರ್ ಬಹು ನಿರೀಕ್ಷಿತ ತೀರ್ಪನ್ನು ನೀಡಿದ್ದು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಸ್ಪೀಕರ್ ನಿರ್ಧಾರವು ಸುಮಾರು 1200 ಪುಟಗಳಷ್ಟಿದೆ. ಪಕ್ಷದ ಸಂವಿಧಾನದ ಪ್ರಕಾರ ಉದ್ಧವ್ ಠಾಕ್ರೆ ಅವರಿಗೆ ಯಾವುದ ನಾಯಕನನ್ನು ಉಚ್ಚಾಟಿಸುವ ಅಧಿಕಾರ ಇರಲಿಲ್ಲ. ಉದ್ಧವ್ ನಾಯಕತ್ವವೇ ಪಕ್ಷದ ಇಚ್ಛೆಯಾಗುವುದಿಲ್ಲ. ಶಿಂಧೆ ಅವರನ್ನು ಪಕ್ಷದಿಂದ ಉಚ್ಟಾಟಿಸುವ ಕ್ರಮವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಹೇಳಿದ್ದಾರೆ. 1999ರ ಶಿವಸೇನೆಯ ಸಂವಿಧಾನವನ್ನು ಪಕ್ಷದ ಸಂವಿಧಾನವನ್ನು ಮಾನ್ಯ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಾದಿಸಿದ್ದಾರೆ. 2018ರ ಸಂವಿಧಾನವನ್ನು ಮಾನ್ಯ ಮಾಡುವಂತೆ ಉಧವ್ ಬಣ ಸಲ್ಲಿಸಿದ್ದ ಮನವಿಯನ್ನು ನಾರ್ವೇಕರ್ ತಿರಸ್ಕರಿಸಿದ್ದಾರೆ.