For the best experience, open
https://m.samyuktakarnataka.in
on your mobile browser.

"ಐಐಟಿ ಬಾಬಾ" ಫಾಲೋವರ್ಸ್‌ ಈಗ ದುಪ್ಪಟ್ಟು

04:35 PM Jan 19, 2025 IST | Samyukta Karnataka
 ಐಐಟಿ ಬಾಬಾ  ಫಾಲೋವರ್ಸ್‌ ಈಗ ದುಪ್ಪಟ್ಟು

ಪ್ರಯಾಗ್ ರಾಜ್: ಮಹಾಕುಂಭಮೇಳದ ಆಕರ್ಷಣೆಗಳಲ್ಲಿ ಒಂದಾಗಿರುವ 'ಐಐಟಿ ಬಾಬಾ' ಖ್ಯಾತಿಯ ಅಭಯ್ ಸಿಂಗ್ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಫಾಲೋವರ್ಸ್‌ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ.
ಹೌದು, ಮಹಾಕುಂಭಮೇಳ ಶುರುವಾದ ಮೊದಲ ದಿನದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ್‌ ಸಿಂಗ್‌ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಸ್ಟಾದಲ್ಲಿ ಈ ಮೊದಲು ಇದ್ದ ಅವರ ಫಾಲೋವರ್ಸ್‌ ಸಂಖ್ಯೆ ಈಗ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದೆ.
ತಿಂಗಳಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಸಂಬಳವಿರುವ ಕೆಲಸವನ್ನು ಮತ್ತು 4 ವರ್ಷ ಪ್ರೀತಿಸಿದ್ದ ಹುಡುಗಿಯನ್ನು ತೊರೆದು ಅಧ್ಯಾತ್ಮದ ಕಡೆ ಮುಖ ಮಾಡಿದ ಐಐಟಿ ಬಾಬಾ ಅವರ ಜೀವನಯಾನ ಈಗ ಎಲ್ಲರ ಗಮನ ಸೆಳೆಯುತ್ತಿದೆ.
36 ವರ್ಷದ ಅಭಯ್‌ ಸಿಂಗ್‌ ಕುಂಭಮೇಳದಲ್ಲಿ ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಂದಿನಿಂದಲೂ ಅಧ್ಯಾತ್ಮದ ಕಡೆ ತೀವ್ರ ತುಡಿತವನ್ನು ಹೊಂದಿದ್ದ ಅಭಯ್‌ ಸಿಂಗ್‌ ಮೂರು ವರ್ಷಗಳ ಹಿಂದೆ ಸನ್ಯಾಸಿಯಾಗಿದ್ದಾರೆ. ಲೌಕಿಕ ಜೀವನವನ್ನು ಬಿಟ್ಟು ಅಧ್ಯಾತ್ಮದ ಹಾದಿಯನ್ನು ತುಳಿದಿದ್ದಾರೆ. ಅವರ ಈ ಆಧ್ಯಾತ್ಮಿಕತೆಯ ಕಡೆಗಿನ ಪಯಣದ ಬಗ್ಗೆ ತಿಳಿಯಲು ಜನ ಕೂಡ ತುಂಬ ಕುತೂಹಲವನ್ನು ಹೊಂದಿದ್ದಾರೆ. ಒಟ್ಟಿನಲ್ಲಿ ಮಹಾಕುಂಭ ಮೇಳದಲ್ಲಿ ಈ ಬಾಬಾ ಅತ್ಯಂತ ಖ್ಯಾತಿ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಪ್ರಚಾರವನ್ನು ಪಡೆದಿದ್ದಾರೆ. ಇನ್ಸ್ಟಾದಲ್ಲಿ ಒಂದು ವಾರದ ಹಿಂದೆ ಸುಮಾರು ಒಂದೂವರೆ ಲಕ್ಷದಷ್ಟಿದ್ದ ಅವರ ಫಾಲೋವರ್ಸ್‌ ಸಂಖ್ಯೆ ಸದ್ಯ 333 K ತನಕ (333,000) ಬಂದು ತಲುಪಿದೆ.

https://www.instagram.com/abhey_singh?utm_source=ig_web_button_share_sheet&igsh=ZDNlZDc0MzIxNw==