For the best experience, open
https://m.samyuktakarnataka.in
on your mobile browser.

ಒಂದು ತಿಂಗಳ ಮುಂಚೆ ಮುದ್ರಣ ಯಾಕೆ…?

11:08 AM Aug 10, 2024 IST | Samyukta Karnataka
ಒಂದು ತಿಂಗಳ ಮುಂಚೆ ಮುದ್ರಣ ಯಾಕೆ…

ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಆಗಬೇಕು. ಆದರೆ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಯಾಕೆ...?

ಬೆಂಗಳೂರು: ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಲೋಕಸೇವಾ ಆಯೋಗವು [KPSC] ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರ ಲೋಕಸೇವಾ ಯೋಗ [UPSC] ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ. ಆದರೆ, ಲೋಕಸೇವಾ ಆಯೋಗ ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಲೋಕಸೇವಾ ಆಯೋಗವು ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಈಗಾಗಲೇ ಇರುವ ಪ್ರಮಾಣಿತ ಕಾರ್ಯ ವಿಧಾನ (Standard Operating Procedure) ನ ಬಿಟ್ಟು ಅವರ ಇಷ್ಟದಂತೆ ಮುದ್ರಣ ಮಾಡಿಟ್ಟುಕೊಳ್ಳುವುದು ಯಾಕೆ ಅಂತ ತಿಳಿಸಲಿ ಎಂದಿದ್ದಾರೆ.