ಹನಿಟ್ರ್ಯಾಪ್ ಮೂವರ ಬಂಧನ
ಬೆಳಗಾವಿ: ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಮೂವರನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿಯ ಲಾಡ್ಜ್ ಒಂದರಲ್ಲಿ ತಂಗಿದ್ದ ಅಬ್ದುಲ್ ಪೈಲವಾನ್, ಸುಭಾನ್ ಹಾಗೂ ರೇಷ್ಮಾ ಕಡಬಿಶಿವಾಪುರ ಬಂಧಿತ ವ್ಯಕ್ತಿಗಳು. ಈರಪ್ಪ ಮುನ್ಯಾಳ ಎಂಬುವರು ಈ ಬಂಧಿತ ವ್ಯಕ್ತಿಗಳ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರನ್ನು ಆಧರಿಸಿ ಮೂಡಲಗಿ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ.
ವಿವರ: ಲಾಡ್ಜ್‌ನಲ್ಲಿ ಪುರುಷ-ಮಹಿಳೆ ತಂಗಿದ್ದ ರೂಂಗೆ ಹೋಗಿ ವಿಡಿಯೋ ಮಾಡಿಕೊಂಡಿದ್ದ ಕೀಚಕರು, ಲಾಡ್ಜ್‌ನಲ್ಲಿ ಮಲಗಿದ್ದ, ಜೋಡಿಯ ಅರೆನಗ್ನ ವಿಡಿಯೋ ಮಾಡಿಕೊಂಡು ೧೦ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಈಗಾಗಲೇ ೯ ಲಕ್ಷ ಹಣ ಪಡೆದುಕೊಂಡು ಮತ್ತೆ ೧ ಲಕ್ಷ ಕೊಡುವಂತೆ ಪೀಡಿಸುತ್ತಿದ್ದರು. ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದ್ದ ಈ ಮೂವರು ಕೀಚಕರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.