For the best experience, open
https://m.samyuktakarnataka.in
on your mobile browser.

ಒಂದೇ ಗ್ರಾಮಕ್ಕೆ ಎರಡು ಪುರಸ್ಕಾರ

07:53 PM Oct 30, 2024 IST | Samyukta Karnataka
ಒಂದೇ ಗ್ರಾಮಕ್ಕೆ ಎರಡು ಪುರಸ್ಕಾರ

ಕೆಂಭಾವಿ: ಕರ್ನಾಟಕ ಸರಕಾರ ಕೊಡಮಾಡುವ ಈ ಬಾರಿಯ 2024ನೇ ಸಾಲಿನ ಅತ್ಯುನ್ನತ ರಾಜ್ಯೋತ್ಸವ ಪುರಸ್ಕಾರಕ್ಕೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದ ಹಿರಿಯ ರಂಗ ಕಲಾವಿದೆ ಸರಸ್ವತಿ ಜುಲೈಕಾ ಬೇಗಂ ರವರು ಭಾಜನರಾಗಿದ್ದಾರೆ. ಹಾಗೇಯೆ ಕರ್ನಾಟಕ ಸಂಭ್ರಮ 50 ರ ಸುವರ್ಣ ಮಹೋತ್ಸವ ಪುರಸ್ಕಾರವೂ ಕೂಡ ಅದೆ ಮಲ್ಲಾ ಬಿ ಗ್ರಾಮದ ಸೂಲಗಿತ್ತಿ ಚನ್ನಬಸಮ್ಮಗೆ ಒಲಿದಿದ್ದು ಗ್ರಾಮ ಸೇರಿದಂತರ ವಲಯದಲ್ಲಿ ಸಂಭ್ರಮ ಮನೆ ಮಾಡಿದೆ

ರಂಗ ಕಲಾವಿದೆಗೆ ರಾಜ್ಯೋತ್ಸವ: ಸರಸ್ವತಿ ಜುಲೈಕಾ ಬೇಗಂ ರವರು ರಂಗ ಕ್ಷೇತ್ರಕ್ಕೆ ಸಲ್ಲಿಸುದ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಬೇಗಂ ರವರು ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ನಾಟಕ ಕಂಪನಿ ಸೇರಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ ಸುಮಾರು 5 ದಶಕಗಳ ವರೆಗೆ ರಂಗ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರು ಅವರ ತವರೂರು, ಸುರಪುರ ತಾಲೂಕಿ ಮಲ್ಲಾ ಗ್ರಾಮದ ವೃತ್ತಿ ರಂಗ ಕರ್ಮಿ ಶೇಖಚಾಂದ್ ಮುಲ್ಲಾ ರವರನ್ನು ವರಿಸಿದ್ದು, ಪಸ್ತುತ ಜೈಲೈಕಾ ಬೇಗಂ ರವರು ತಮ್ಮ ಮಗನೊಂದಿಗೆ ಮೈಸೂರಲ್ಲಿ ನೆಲೆಸಿರುವರು.
1950 ರಲ್ಲಿ ಇವರ ಅಭಿನಯ ಪಯಣ ಆರಂಭ, ಆರಂಭದಲ್ಲಿ ಬಾಲ ಕಲಾವಿಧೆಯಾಗಿ ಸೈ ಎನಿಸಿಕೊಂಡ ಬೇಗರವರು ಹಲವಾರು ಸಾಮಾಜಿಕ ಪೌರಾಣಿಕ ನಾಟಗಳಲ್ಲಿ ಪಾತ್ರ ನಿರ್ವಹಿಸಿದ್ದು. ಬೇಗಂ ಅವರು ನಟರಾದ 'ನರಸಿಂಹರಾಜು, ಎನ್. ಎಸ್. ರಾವ್, ಬಿ. ಜಯ, ವಜ್ರ ಮುನಿ, ಸುದೀರ್, ರಾಜೇಶ್, ಸುದರ್ಶನ್-ಶೈಲಶ್ರಿ ಅಶ್ವತ್, ದಿರೇಂದ್ರ ಶ್ರೀ ನಿವಾಸಮೂರ್ತಿ, ಸುಂದರ್‌ರಾಜ್, ಕರಿಬಸವಯ್ಯ, ಡಿಂಗ್ರಿ ಗೋಪಾಲ್, ನಾಗರಾಜ್, ಸುಂದರಕೃಷ್ಣ ಅರಸ್' ಮುಂತಾದವರ ಜೊತೆ ಅನೇಕ ನಾಟಕಗಳಲ್ಲಿ ಅವರಿಗೆ ಸರಿಸಮನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಸೂಲಗಿತ್ತಿ ಚನ್ನಬಸಮ್ಮಗೆ ಒಲಿದ ಸುವರ್ಣ ಸಂಭ್ರಮ ಪುರಸ್ಕಾರ: ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದವರೆ ಆದ ಚನ್ನಬಸಮ್ಮ ತಳವಾರ ರವರು ಇಲ್ಲಿಯವರೆ ಸುಮಾರು 5 ಸಾವಿರಕ್ಕು ಹೆಚ್ಚು ಹೆರಿಗೆಗಳನ್ನು ಮಾಡಿ ಜನ ಮಚ್ವುಗೆಗೆ ಪಾತ್ರರದ ಕೀರ್ತಿ ಅವರದ್ದಾಗಿದೆ. ರಾಜ್ಯ ಸರಕಾರ ಇವರ ಸೇವೆಯನ್ನು ಪರಿಗಣಿಸಿ ಸುವರ್ಣ ಸಂಭ್ರಮ 50 ರ ಪುರಸ್ಕಾರ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ಎರಡು ಪುರಸ್ಕಾರಗಳು ಒಂದೆ ಗ್ರಾಮಕ್ಕೆ ಲಭಿಸಿದಂತಾಗಿದ್ದು, ಕೆಂಭಾವಿ ವಲಯದ ಸಾರ್ವಜನಿಕ ವಲದಲ್ಲಿ ಸಂತಸ ಮನೆಮಾಡಿದೆ.

Tags :