ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಂದೇ ದಿನದಲ್ಲಿ ಉದ್ಯೋಗ ನೀಡಿ ಅನುಕಂಪ ತೋರಿದ ಡಿಸಿ

07:36 PM Nov 19, 2024 IST | Samyukta Karnataka

ತುಮಕೂರು: ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ಶಾಮಕ ವಾಹನ ಚಾಲಕನ ಪತ್ನಿಗೆ ಸರ್ಕಾರದಿಂದ ಆದೇಶ ಬಂದ ಕ್ಷಣದಲ್ಲೇ ಅನುಕಂಪದ ಉದ್ಯೋಗ ನೀಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದ ಘಟನೆ ಇಂದು ನಡೆಯಿತು.
ತುರುವೇಕೆರೆ ತಾಲೂಕು ಡಿ ಕಲ್ಕೆರೆಯ ಪರಮೇಶ್ವರ್ ಅಗ್ನಿಶಾಮಕ ವಾಹನದ ಚಾಲಕರಾಗಿ ಉದ್ಯೋಗದಲ್ಲಿದ್ದರು. ಕರ್ತವ್ಯ ಮುಗಿಸಿ ಮನೆಗೆ ಬರುವಾಗ 2023ರಲ್ಲಿ ಅಪಘಾತದಲ್ಲಿ ಮೃತರಾಗಿದ್ದರು. ಈ ಪ್ರಕರಣ ಇಲಾಖೆ ಹಂತದಲ್ಲಿ ಇತ್ಯರ್ಥವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಇಂದು ಆದೇಶವಾಗಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಮೃತ ಪರವೇಶ್ವರ್ ಅವರ ಪತ್ನಿ ರೋಹಿಣಿ ಅವರನ್ನು ಕಚೇರಿಗೆ ಕರೆದು ಮಾತನಾಡಿಸಿದರು.
ಮೂರು ವರ್ಷದ ತಮ್ಮ ಮಗು ಹಾಗೂ ಅತ್ತೆಯೊಂದಿಗೆ ಬಂದಿದ್ದ ರೋಹಿಣಿಯವರನ್ನು ತಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಅನುಕಂಪದ ಉದ್ಯೋಗದ ನೇಮಕಾತಿ ಆದೇಶವನ್ನು ಸಂತ್ರಸ್ಥ ಮಹಿಳೆಗೆ ನೀಡಿದರು.
ಕುಣಿಗಲ್ ತಾಲೂಕಿನಲ್ಲಿ ಡಿ ವರ್ಗದ ನೌಕರರಾಗಿ ನೇಮಕಾತಿಗೆ ಆದೇಶಿಸಿ ರೋಹಿಣಿಯವರಿಗೆ ಆದೇಶ ಪತ್ರ ನೀಡಿದರು. ನೇಮಕಾತಿ ಆದೇಶ ಸಿದ್ಧವಾಗುವವರೆಗೆ ಅರ್ಧ ತಾಸು ತಮ್ಮಕಚೇರಿಯಲ್ಲಿ ಪಕ್ಕದಲ್ಲೇ ಕುರ್ಚಿಯಲ್ಲಿ ಕೂರಿಸಿಕೊಂಡ ಜಿಲ್ಲಾಧಿಕಾರಿಗಳು ಮಗುವಿಗೆ ಬಿಸ್ಕತ್ತು, ಚಾಕ್ಲೆಟ್ ನೀರು ತರಿಸಿ ಕೊಟ್ಟಿದ್ದು ಅವರ ಅಂತಃಕರಣದ ಭಾವವನ್ನು ತೋರಿತು.

Tags :
#Tumakuru#ತುಮಕೂರು
Next Article