For the best experience, open
https://m.samyuktakarnataka.in
on your mobile browser.

ಒಂದೇ ವರ್ಷದಲ್ಲಿ ೨೫ ಹುಲಿ ನಾಪತ್ತೆ

10:55 PM Nov 06, 2024 IST | Samyukta Karnataka
ಒಂದೇ ವರ್ಷದಲ್ಲಿ ೨೫ ಹುಲಿ ನಾಪತ್ತೆ

ಜೈಪುರ: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಲ್ಲಿದ್ದ ೭೫ ಹುಲಿಗಳ ಪೈಕಿ ೨೫ ಹುಲಿಗಳು ಕಳೆದೊಂದು ವರ್ಷದಲ್ಲಿ ಕಾಣೆಯಾಗಿವೆ. ಅವುಗಳಲ್ಲಿ ೧೧ಕ್ಕೂ ಹೆಚ್ಚು ಹುಲಿಗಳು ೧ ವರ್ಷಕ್ಕೂ ಹೆಚ್ಚು ಅವಧಿಯಿಂದ ನಾಪತ್ತೆಯಾಗಿವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ವ್ಯಾಘ್ರಗಳನ್ನು ಪತ್ತೆ ಹಚ್ಚುವುದಕ್ಕಾಗಿ ವನ್ಯಜೀವಿ ಇಲಾಖೆಯು ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ದಾಖಲೆಗಳ ಪರಿಶೀಲನೆ ಜೊತೆಗೆ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಕುರಿತು ಶಿಫಾರಸು ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದು ವರ್ಷದಲ್ಲಿ ೨೫ ಹುಲಿಗಳು ನಾಪತ್ತೆಯಾಗಿರುವುದು ಇದೇ ಮೊದಲು. ಈ ಹಿಂದೆ ಇದೇ ರಾಷ್ಟ್ರೀಯ ಉದ್ಯಾನದಲ್ಲಿ ೨೦೧೯ರಿಂದ ೨೦೨೨ರವರೆಗೆ ೧೩ ಹುಲಿಗಳು ಕಾಣೆಯಾಗಿದ್ದು ವರದಿಯಾಗಿತ್ತು.