ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಲಿಂಪಿಕ್ಸ್ ಬಿಡ್ಡಿಂಗ್‌ಗೆ ಕೇಂದ್ರ ಪತ್ರ

09:56 PM Nov 05, 2024 IST | Samyukta Karnataka

ನವದೆಹಲಿ: ಭಾರತದ ಬಹು ವರ್ಷಗಳ ಕನಸಿನ ಈಡೇರಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಟ್ಟಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಗೆ ಪತ್ರ ಬರೆದಿದ್ದು, ೨೦೩೬ರಲ್ಲಿ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಸಿದ್ಧವಿದೆ ಎಂದು ಲೆಟರ್ ಆಫರ್ ಇಂಟೆಂಟ್ ಅನ್ನು ಸಲ್ಲಿಸಿದೆ. ಇದರಿಂದ, ೨೦೩೬ರಲ್ಲಿ ಭಾರತದಲ್ಲೇ ಒಲಿಂಪಿಕ್ಸ್ ನಡೆಸಬೇಕೆಂಬ ಕೇಂದ್ರ ಸರ್ಕಾರದ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಂತಾಗಿದೆ.
ಆದರೆ, ಈಗ ಭಾರತದಲ್ಲಿ ಒಲಿಂಪಿಕ್ಸ್ ನಡೆಸುವ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಬಿಡ್ಡಿಂಗ್‌ನಲ್ಲಿ ಭಾರತ ಪಾಲ್ಗೊಳ್ಳಲಿದೆ.
ಈಗಾಗಲೇ ಕ್ರೀಡಾ ಸಚಿವಾಲಯ ದೇಶದಲ್ಲಿ ತೆಗೆದುಕೊಂಡಿರುವ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರದ ಈ ಕ್ರಮದಿಂದ ಮತ್ತಷ್ಟು ಬಲ ಬರಲಿದ್ದು, ದೇಶದಲ್ಲಿ ಒಲಿಂಪಿಕ್ಸ್ ನಡೆಯುವ ಕನಸುಗಳು ಆರಂಭಗೊಳ್ಳಲಿವೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, `ದೇಶದಲ್ಲಿ ಮುಂದಿನ ದಿನಗಳಲ್ಲಿ ಕ್ರೀಡಾಭಿವೃದ್ಧಿಗೆ ಹಲವು ಅವಕಾಶಗಳು ತೆರೆದುಕೊಳ್ಳಲಿವೆ. ಅಷ್ಟೇ ಅಲ್ಲದೇ, ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ದೇಶಾದ್ಯಂತ ಯುವ ಸಬಲೀಕರಣಕ್ಕೆ ಉತ್ತೇಜನ ಸಿಗಲಿದೆ." ಎಂದಿದ್ದಾರೆ. ಇದರ ಜೊತೆಗೆ ಒಮ್ಮೆ ಭಾರತದಲ್ಲೇ ಒಲಿಂಪಿಕ್ಸ್ ಆಯೋಜನೆಗೊಂಡರೆ, ದೇಶೀಯ ಕ್ರೀಡೆಗಳಾದ ಯೋಗ, ಖೋ ಖೋ ಮತ್ತು ಕಬಡ್ಡಿಯಂತಹ ಸ್ಥಳೀಯ ಕ್ರೀಡೆಗಳು ಜಾಗತಿಕ ಮಟ್ಟದಲ್ಲಿ ಸ್ಥಾನ ಸಂಪಾದಿಸಬಹುದಾಗಿದೆ. ಆದರೆ, ಇದಕ್ಕೆ ಈಗ ಬಿಡ್ಡಿಂಗ್‌ನಲ್ಲಿ ಭಾರತ ಕ್ರೀಡಾಕೂಟವನ್ನು ಆತಿಥ್ಯ ವಹಿಸಿಕೊಳ್ಳಲು ಯಶಸ್ವಿಯಾಗಬೇಕಾಗಿದೆ.
ಪ್ರಧಾನಿ ಮೋದಿಯ ಕನಸು
ಸದ್ಯ ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ಸ್ ಸೆಲ್ ಯಶಸ್ವಿ ಬಿಡ್‌ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ವರದಿಯನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಕ್ರೀಡಾಕೂಟದ ಮಹತ್ವವನ್ನು ಒತ್ತಿ ಹೇಳಿದ್ದು, "ಭಾರತವು ೨೦೩೬ ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಹಿಂದಿನ ಒಲಿಂಪಿಕ್ಸ್‌ನಲ್ಲಿ ಆಡಿದ ಕ್ರೀಡಾಪಟುಗಳ ಮಾಹಿತಿ ಬಹಳ ನೆರವಾಗಿದ್ದು, ದೇಶದ ಜನ ಅನೇಕ ವಿಷಯಗಳನ್ನು ಗಮನಿಸಿದ್ದಾರೆ. ೨೦೩೬ರ ತಯಾರಿಯಲ್ಲಿ ನಾವು ಯಾವುದೇ ಸಣ್ಣ ವಿವರಗಳನ್ನು ಕಳೆದುಕೊಳ್ಳದಂತೆ ನಾವು ಎಚ್ಚರ ವಹಿಸಿದ್ದು, ಈ ಬಗ್ಗೆ ಹಂಚಿಕೊಳ್ಳಲು ಬಯಸುತ್ತೇವೆ "ಎಂದು ಮೋದಿ ತಿಳಿಸಿದ್ದಾರೆ.
ಕಳೆದ ವರ್ಷದ ಐಒಸಿ ಸಭೆಯಲ್ಲಿ, "೨೦೩೬ ರಲ್ಲಿ ಭಾರತದ ನೆಲದಲ್ಲಿ ಒಲಿಂಪಿಕ್ಸ್ ಆಯೋಜಿಸುವ ನಮ್ಮ ಪ್ರಯತ್ನದಲ್ಲಿ ನಾವು ಯಾವುದೇ ಅವಕಾಶ ಕಳೆದುಕೊಳ್ಳುವುದಿಲ್ಲ, ಇದು ೧೪೦ ಕೋಟಿ ಭಾರತೀಯರ ಹಳೆಯ ಕನಸು ಮತ್ತು ಆಕಾಂಕ್ಷೆಯಾಗಿದೆ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ಈ ಕನಸು ನನಸಾಗಬೇಕಿದೆ. ಎಂದು ಮೋದಿ ತಿಳಿಸಿದ್ದರು. ಈಗ ಐಒಸಿಗೆ ಪತ್ರ ಸಲ್ಲಿಸುವ ಮೂಲಕ ಒಲಿಂಪಿಕ್ಸ್ ಬಿಡ್ಡಿಂಗ್‌ನಲ್ಲಿ ಆತಿಥ್ಯಕ್ಕೆ ಅವಕಾಶ ಪಡೆಯಲು ಭಾರತ ಹೋರಾಟ ನಡೆಸಲಿದೆ.
ಒಮ್ಮೆ ಬಿಡ್ಡಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸುವ ಅವಕಾಶ ಸಿಕ್ಕಿದ್ದೇ ಆದಲ್ಲಿ, ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ ೧೦ನೇ ರಾಷ್ಟ್ರ ಭಾರತ ಎನ್ನಿಸಿಕೊಳ್ಳಲಿದೆ. ಇದೇ ರೀತಿ ಮೆಕ್ಸಿಕೋ, ಇಂಡೋನೇಷ್ಯಾ, ಟರ್ಕಿ, ಪೋಲೆಂಡ್, ಈಜಿಪ್ಟ್ ಮತ್ತು ದಕ್ಷಿಣ ಕೊರಿಯಾ ಕೂಡ ಒಲಿಂಪಿಕ್ಸ್ ಆತಿಥ್ಯಕ್ಕೆ ಒಲವು ತೋರಿವೆ.
ಇದೇ ವೇಳೆ ಭಾರತೀಯ ಅಥ್ಲೇಟಿಕ್ಸ್ ಫೆಡೆರೇಷನ್ ಅಧ್ಯಕ್ಷರಾಗಿರುವ ಅಡಿಲ್ಲೆ ಜೆ. ಸುಮಾರಿವಲ್ಲಾ ಮಾತನಾಡಿ, "ಇದೊಂದು ಉತ್ತಮ ಕ್ಷಣವಾಗಿದ್ದು, ಭಾರತವು ಒಲಿಂಪಿಕ್ಸ್ ಬಿಡ್ಡಿಂಗ್‌ಗೆ ಮುಂದಾಗಿರುವುದು ಅದ್ಭುತ ನಿರ್ಧಾರವಾಗಿದೆ. ಭಾರತವು ಜಗತ್ತಿಗೆ ತಾನು ಏನು ಮಾಡಬಹುದು ಎಂಬುದನ್ನು ತೋರಿಸಿದ ಸಮಯ ಇದಾಗಿದೆ. ನಾವು ತಯಾರಿ ಮಾಡಲು ಸಾಕಷ್ಟು ಸಮಯವಿದೆ." ಎಂದಿದ್ದಾರೆ.

Next Article