For the best experience, open
https://m.samyuktakarnataka.in
on your mobile browser.

ಒಲಿಂಪಿಕ್ಸ್: ಭಾರತಕ್ಕೆ ಚೊಚ್ಚಲ ಪದಕ

04:17 PM Jul 28, 2024 IST | Samyukta Karnataka
ಒಲಿಂಪಿಕ್ಸ್  ಭಾರತಕ್ಕೆ ಚೊಚ್ಚಲ ಪದಕ

ಪ್ಯಾರಿಸ್​: 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಮನು ಭಾಕರ್ ಮೂರನೇ ಸ್ಥಾನ ಪಡೆಯುವ ಮೂಲಕ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಬಾಚಿಕೊಂಡಿದ್ದಾರೆ.

ಇನ್ನು 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್ 631.5 ಅಂಕಗಳಿಸಿ 5ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ರೋಯಿಂಗ್​ ಸ್ಪರ್ಧೆಯಲ್ಲಿ ಬಾಲರಾಜ್​ ಪನ್ವರ್ ಪುರುಷರ ಸಿಂಗಲ್ಸ್​ ಸ್ಕಲ್ಸ್​ ವಿಭಾಗದ ರಿಪಿಚೇಜ್‌ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್​ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಶಟ್ಲರ್​ ಪಿ.ವಿ ಸಿಂಧು ಮಹಿಳಾ ಸಿಂಗಲ್ಸ್​ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡಿವ್ಸ್​ನ ಫಾತಿಮತ್ ನಬಾಹಾ ಅಬ್ದುಲ್ ರಝಾಕ್ ವಿರುದ್ಧ 21-9, 21-6 ನೇರ ಗೇಮ್​ಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.