ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ ಯತ್ನಾಳ್ ಆಗ್ರಹ

11:40 AM Jan 21, 2025 IST | Samyukta Karnataka

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಮಾತಂತೆ ಗೃಹ ಮಂತ್ರಿಗಳ ಉಡಾಫೆ ಮಾತುಗಳು

ಬೆಂಗಳೂರು: ದರೋಡೆ ಮಾಡುತ್ತಿರುವವರ ಸುಳಿವು ಸಿಕ್ಕಲ್ಲಿ 'ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿ' [Shoot at Sight] - ಅಪರಾಧಿಗಳಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆ ಮಾತಂತೆ ಗೃಹ ಮಂತ್ರಿಗಳ ಉಡಾಫೆ ಮಾತುಗಳು, ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಯನ್ನು normalize ಮಾಡುವ ಪ್ರವೃತ್ತಿ ಪೊಲೀಸ್ ಇಲಾಖೆಯ ಮೇಲೂ ಬಿದ್ದಂತಿದೆ. ಸಾಲು ಸಾಲು ದರೋಡೆ, ಮನೆಗಳ್ಳತನ, ಬ್ಯಾಂಕ್ ದರೋಡೆ ನಡೆಯುತ್ತಿದ್ದರೂ ಕಿಂಚಿತ್ತೂ ವಿಚಲಿತರಾಗದೆ 'ತನಿಖೆ ಪ್ರಗತಿಯಲ್ಲಿದೆ', ' ಕೃತ್ಯವೆಸಗಿದವರು ಮಾನಸಿಕ ಅಸ್ವಸ್ಥರು' ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಕೊಡುತ್ತಿರುವುದು ನಿಜಕ್ಕೂ ಬೇಜವಾಬ್ದಾರಿತನದ ಪರಮಾವಧಿ. ದರೋಡೆಕೋರರಿಗೆ ಭೀತಿ ಮೂಡಿಸುವ ಕೆಲಸ ಮಾಡಿಸಿ. ರಾಜ್ಯದಲ್ಲಿ ಜನರು ಸುರಕ್ಷಿತರಾಗಿದ್ದರೆ ಎಂಬ ಭಾವನೆಯನ್ನು ಮೂಡಿಸಬೇಕಾದದ್ದು ಗೃಹ ಮಂತ್ರಿಗಳ ಕರ್ತವ್ಯ. ಕೂಡಲೇ ಜಿಲ್ಲಾವಾರು ಪೊಲೀಸ್ ಸ್ಕ್ವಾಡ್ ಗಳನ್ನೂ ರಚಿಸಿ ಮನೆಗಳ್ಳತನ, ದರೋಡೆ ಇತ್ಯಾದಿ ಕೃತ್ಯವೆಸಗಿಟ್ಟಿರುವವರ ಮೇಲೆ ಆಯುಧದ ಮೂಲಕ ಉತ್ತರಿಸಿ ಎಂದಿದ್ದಾರೆ.

Tags :
#ಅತ್ಯಾಚಾರ#ಕಾಂಗ್ರೆಸ್‌#ಕೊಲೆ#ಜಿಪರಮೇಶ್ವರ#ದರೋಡೆ#ಬಸನಗೌಡಪಾಟೀಲಯತ್ನಾಳ#ಬಿಜೆಪಿ#ಹಲ್ಲೆ
Next Article