ಕಡಲಾಚೆಯ ಖನಿಜಗಳಿಗೆ ಹೊಸ ರಾಯಧನ ದರ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಕಡಲಾಚೆಯ ಖನಿಜಗಳಿಗೆ ಹೊಸ ರಾಯಧನ ದರಗಳನ್ನು ಅನುಮೋದಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಈ ನಿರ್ಧಾರದೊಂದಿಗೆ, ಕಡಲಾಚೆಯ ಖನಿಜಗಳ ಹರಾಜನ್ನು ತ್ವರಿತಗೊಳಿಸುವುದು, ಕಡಲಾಚೆಯ ಪ್ರದೇಶಗಳಿಗೆ ಖನಿಜ ಹರಾಜಿನಲ್ಲಿ ಭಾಗವಹಿಸಲು ಉತ್ತೇಜನ ದೊರಕುವುದು ಮತ್ತು ಖನಿಜ ವಲಯದಲ್ಲಿ ಸ್ವಾವಲಂಬನೆ ಹೆಚ್ಚಿಸಲು ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ಆದರೆ ಇಷ್ಟು ವರ್ಷಗಳಲ್ಲಿ ಭಾರತವು ಇದನ್ನು ಮಾಡದಂತೆ ತಡೆದಿದ್ದು ಏನು? ಕಡಲಾಚೆಯ ಖನಿಜ ಅಭಿವೃದ್ಧಿಯಲ್ಲಿ ಕಾಂಗ್ರೆಸ್ನ ಹಗರಣವನ್ನು ಬಯಲಿಗೆಳೆಯುವ ಸಮಯ ಬಂದಿದೆ!
2002 ರಲ್ಲಿ, ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರವು ಕಡಲಾಚೆಯ ಪ್ರದೇಶಗಳ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯನ್ನು ಪರಿಚಯಿಸಿತು. ಆದರೂ, ಅದನ್ನು ಜಾರಿಗೆ ತರಲು ಯುಪಿಎ ಸರಕಾರಕ್ಕೆ ಹಲವು ವರ್ಷಗಳೇ ಬೇಕಾಯಿತು. ಮಾಡಿದರೂ ಅವರು ಅದನ್ನು ಅಪ್ಪಟ ಕಾಂಗ್ರೆಸ್ ಶೈಲಿಯಲ್ಲಿ ಹಗರಣಭರಿತ ಮಾಡಿದರು!
ಅಂತಿಮವಾಗಿ 2010 ರಷ್ಟರಲ್ಲಿ ಆಗಿದ್ದೇನು? 62 ಕಡಲಾಚೆಯ ಖನಿಜ ಬ್ಲಾಕ್‌ಗಳನ್ನು ಅಕ್ರಮವಾಗಿ ಹಸ್ತಾಂತರಿಸಲಾಗಿತ್ತು. ತನಿಖಾ ಸಂಸ್ಥೆಗಳೂ ನಂಬಲಾಗದಷ್ಟು ಅಕ್ರಮ ನಡೆದಿತ್ತು ಕಾಂಗ್ರೆಸ್ ಆಡಳಿತದಲ್ಲಿ.
ಒಬ್ಬನೇ ನಿರ್ದೇಶಕ ಮತ್ತು ಒಂದೇ ವಿಳಾಸ ಹೊಂದಿರುವ 5 ಕಂಪನಿಗಳಿಗೆ 28 ಬ್ಲಾಕ್‌ಗಳನ್ನು ಕೊಡಲಾಗಿತ್ತು ಎಂದು ವಿಚಾರಣೆಯಿಂದ ಬಯಲಾಗಿತ್ತು! ಮತ್ತು ಈ ಕಂಪನಿಗಳ ನೋಂದಣಿ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯ ಗಡುವಿನ ನಂತರ ಮಾಡಲಾಗಿತ್ತು.
ಕಾಂಗ್ರೆಸ್‌ನ ಅರ್ಥವಿಲ್ಲದ ನೀತಿಗಳು ನಮ್ಮ ಕಡಲಾಚೆಯ ಖನಿಜ ಸಂಪನ್ಮೂಲಗಳ ಅಭಿವೃದ್ಧಿಯನ್ನು ಕುಂಠಿತಗೊಳಿಸಿದವು, ಅವರ ಆಡಳಿತವು ರಾಷ್ಟ್ರದ ಪ್ರಗತಿಗಿಂತ ಆಯ್ದ ಕೆಲವರ ಹಿತಾಸಕ್ತಿಯಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿತು.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ನಾವು ದಶಕಗಳ ಹಾನಿಯನ್ನು ನಿವಾರಿಸುತ್ತಿದ್ದೇವೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಪರಿವರ್ತನೆಯನ್ನು ತರುತ್ತಿದ್ದೇವೆ. ಇಂದು, ಭಾರತದ ಖನಿಜ ಗಣಿಗಾರಿಕೆ ಕ್ಷೇತ್ರವು ನಿಜವಾಗಿಯೂ ಭಾರತದ ಆರ್ಥಿಕತೆಯನ್ನು ಬಲಪಡಿಸುವ ಯಂತ್ರವಾಗುತ್ತಿದೆ ಎಂದಿದ್ದಾರೆ.