ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕಥೆಗಳನ್ನು ಗಡಿ ಮೀರಿ ಹಂಚಿಕೊಳ್ಳುವುದು ನಮ್ಮ ಪ್ರಯತ್ನ

05:20 PM Jan 20, 2025 IST | Samyukta Karnataka

ನಮ್ಮ ಮೂಲ ಸಂಸ್ಕೃತಿಯನ್ನು ಆಚರಿಸುತ್ತಾ ವಿಕಸಿತ ಭಾರತವನ್ನು ನಿರ್ಮಿಸುವತ್ತ ಮತ್ತೊಂದು ಹೆಜ್ಜೆ

ಮೈಸೂರು: ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ಮೈಸೂರ್ಸ್ ಇಂಟರ್ರೆಗ್ನಮ್ ಪುಸ್ತಕವನ್ನು ಸಂಸದ ಯದುವೀರ್ ಒಡೆಯರ್ ಬಿಡುಗಡೆ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದು ಇಂದು ಭಾರತದ ಖ್ಯಾತ ಇತಿಹಾಸಕಾರರಾದ ಡಾ. ವಿಕ್ರಮ್ ಸಂಪತ್ ಅವರ ಹೊಸ ಕೃತಿ ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ಮೈಸೂರ್ಸ್ ಇಂಟರ್ರೆಗ್ನಮ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಾಯಿತು. ಇತಿಹಾಸದಲ್ಲಿ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಆಳ ಅಗಲವನ್ನು ಶೋಧಿಸಿˌ ಸತ್ಯಾಸತ್ಯತೆಯನ್ನು ತೆರೆದಿಡುವಂತಹ ಅನೇಕ ಗಮನಾರ್ಹ ಕೃತಿಗಳನ್ನು ಇವರು ರಚಿಸಿದ್ದಾರೆ.

ಇತಿಹಾಸ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿರುವ ಡಾ. ಸಂಪತ್'ರವರು, ಅವರ ಪುಸ್ತಕಗಳಾದ ಸ್ಪ್ಲೆಂಡರ್ಸ್ ಆಫ್ ರಾಯಲ್ ಮೈಸೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ದಿ ಒಡೆಯರ್ಸ್, ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಾಟನ್ ಪಾಸ್ಟ್, ಸಾವರ್ಕರ್: ಎ ಕಂಟೆಸ್ಟೆಡ್ ಲೆಗಸಿ ಮತ್ತು ಬ್ರೇವ್‌ಹಾರ್ಟ್ಸ್ ಆಫ್ ಭಾರತ್ ನಂತಹ ಗತಕಾಲದ ಬಗ್ಗೆ ತಿಳಿಸುವಂತಹ ನೈಜ್ಯತೆಗಳನ್ನು ತಮ್ಮ ಸಂಶೋಧನೆಯ ಮೂಲಕ ಜಗತ್ತಿಗೆ ತಿಳಿಸಿದ್ದಾರೆ. ಅವರ ಪ್ರತಿಯೊಂದು ಕೃತಿಯು ಶತಮಾನಗಳಿಂದ ನಮ್ಮ ರಾಷ್ಟ್ರವನ್ನು ರೂಪಿಸಿದ ಧೈರ್ಯ, ಹೋರಾಟಗಳುˌ ಆಚರಣೆ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸುತ್ತದೆ.

ಅವರ ಇತ್ತೀಚಿನ ಕೃತಿ, ಟಿಪ್ಪು ಸುಲ್ತಾನ್: ದಿ ಸಾಗಾ ಆಫ್ ಮೈಸೂರ್ಸ್ ಇಂಟರ್ರೆಗ್ನಮ್, ಇತಿಹಾಸದ ಕರಾಳ ಮತ್ತು ಸಂಕೀರ್ಣ ಅವಧಿಯನ್ನು ಪರಿಶೀಲಿಸುತ್ತದೆ. ತಮ್ಮ ವಿಶಿಷ್ಟ ಶೋಧನಾ ಶೈಲಿ ಮತ್ತು ನಿಖರತೇಯಿಂದ ಡಾ. ಸಂಪತ್ ಅವರು ಇತಿಹಾಸದಲ್ಲಾಗಿದ್ದ ತಪ್ಪು ನಿರೂಪಣೆಗಳು ಹಾಗೂ ವಿಷಯಗಳಿಗೆ ಈ ಕೃತಿಯಿಂದ ಸ್ಪಷ್ಟತೆ ನೀಡಿದ್ದಾರೆ. ಇದೆ ಸಂದರ್ಭದಲ್ಲಿ ಮಿಲಿಟರಿ ಸೇವೆ, ಕೃಷಿ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಕ್ಷೇತ್ರಗಳಲ್ಲಿ ಭಾರತಕ್ಕೆ ಅಸಾಧಾರಣ ಕೊಡುಗೆಗಳಿಗೆ ನೀಡಿರುವ ನಮ್ಮ ಕೊಡಗಿನ ವಿಶಿಷ್ಟ ಪರಂಪರೆಯ ಕುರಿತು ವೇದಿಕೆಯಲ್ಲಿ ಹಂಚಿಕೊಳ್ಳಲಾಯಿತು. ಕೊಡಗಿನ ಇತಿಹಾಸದ ಬಗ್ಗೆ ಸಮಗ್ರ ಪುಸ್ತಕ ಬರೆಯುವಂತೆ ನಾನು ಡಾ. ಸಂಪತ್ ಅವರಿಗೆ ವಿನಂತಿಸಿದೆ. ಕೊಡಗಿನ ಪರಂಪರೆ ಮತ್ತು ಮಹತ್ವವನ್ನು ಶ್ರೇಷ್ಠ ಇತಿಹಾಸಕಾರರು ದಾಖಲಿಸಬೇಕೆಂಬುದು ನನ್ನ ಆಶಯ.

ಈ ಕಾರ್ಯಕ್ರಮವು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವ ಹಾಗೂ ಅದನ್ನು ಸಂರಕ್ಷಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ನಿರ್ವಹಿಸುವುದರ ಬಗ್ಗೆ ತಿಳಿಸುತ್ತದೆ. ಇಂತಹ ಉಪಕ್ರಮಗಳ ಮೂಲಕವೇ ನಾವು ಇತಿಹಾಸದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀಮತಿ ಛಾಯಾ ನಂಜಪ್ಪ ಮತ್ತು ಶ್ರೀ ನಿಖಿಲೇಶ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಅವರ ಸಮರ್ಪಣಾ ಭಾವದಿಂದ ನಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಗೌರವಿಸಲು ಜನರನ್ನು ಒಟ್ಟುಗೂಡಿಸಲು ಒಂದು ವೇದಿಕೆಯನ್ನು ಒದಗಿಸಿದೆ.

ಕೊಡಗು ಮತ್ತು ಮೈಸೂರಿನ ಕಥೆಗಳನ್ನು ಗಡಿ ಮೀರಿ ಹಂಚಿಕೊಳ್ಳುವ ನಮ್ಮ ಪ್ರಯತ್ನ ಮುಂದುವರೆಸುವುದರ ಜೊತೆಗೆ, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಂತಾಗಬೇಕು. ಒಟ್ಟಾರೆ, ನಮ್ಮ ಮೂಲ ಸಂಸ್ಕೃತಿಯನ್ನು ಆಚರಿಸುತ್ತಾ ವಿಕಸಿತ ಭಾರತವನ್ನು ನಿರ್ಮಿಸುವತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ ಎಂದಿದ್ದಾರೆ.

Next Article