ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕನಿಷ್ಠ ವೇತನ ದರ ಹೆಚ್ಚಳ

11:28 AM Sep 27, 2024 IST | Samyukta Karnataka

ನವದೆಹಲಿ : ಅಸಂಘಟಿತ ನೌಕರರನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂಲಕ ಕನಿಷ್ಠ ವೇತನ ದರ ಹೆಚ್ಚಿಸಿದೆ.
ಇದು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರು, ಲೋಡಿಂಗ್‌-ಅನ್‌ಲೋಡಿಂಗ್‌, ಕಸ ಗುಡಿಸುವ ಕಾರ್ಮಿಕರು, ಸ್ವತ್ಛತಾ ಕಾರ್ಮಿಕರು, ಮನೆಗೆಲಸದ ಕಾರ್ಮಿಕರು, ಗಣಿಗಾರಿಕೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಕಾರ್ಮಿಕರು ಇದರ ಲಾಭ ಪಡೆಯಲಿದ್ದಾರೆ. ವೇತನ ಪರಿಷ್ಕರಣೆ ಅಡಿಯಲ್ಲಿ ಎ- ವರ್ಗದಲ್ಲಿರುವವರು ದಿನಕ್ಕೆ 783 ರೂ.ಗಳಂತೆ ತಿಂಗಳಿಗೆ ರೂ 20,358 ರೂ., ಅರೆ-ಕುಶಲ ಕೆಲಸಗಾರರು 868 ರೂ. ನಂತೆ ತಿಂಗಳಿಗೆ ರೂ 22,568 ರೂ., ನುರಿತ ಮತ್ತು ಕ್ಲೆರಿಕಲ್ ಕೆಲಸಗಾರರು ದಿನಕ್ಕೆ 954 ರೂ.ನಂತೆ 24,804 ರೂ., ಹೆಚ್ಚು ನುರಿತ ಕೆಲಸಗಾರರು ಅದಕ್ಕಿಂತಲೂ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ. ಈ ಮೊದಲು ಕೇಂದ್ರ ಸರಕಾರವು ಈ ವರ್ಷದ ಎಪ್ರಿಲ್‌ನಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸಿತ್ತು.

Tags :
#MinimumWages#WorkersSalaryHike
Next Article