ಕನ್ನಡಿಗರಿಗಾಗಿ ಅವರೆತ್ತಿದ ಗಟ್ಟಿ ಧ್ವನಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ
ಬೆಂಗಳೂರು/ ಹುಬ್ಬಳ್ಳಿ: ಸಿ ಎಂ ಸಿದ್ದರಾಮಯ್ಯ ಅವರು ದೇಶದ ಶ್ರೇಷ್ಠ ಅಹಿಂದ ನಾಯಕನಾಗಿ ಬೆಳೆದ ರೀತಿ, ರಾಜ್ಯದ ಬಡವರಿಗಾಗಿ ಕೊಟ್ಟ ಅದ್ಭುತ ಗ್ಯಾರಂಟಿಗಳು, ಭಾಗ್ಯಗಳು ಹಾಗೂ ಕನ್ನಡಿಗರಿಗಾಗಿ ಜಿಎಸ್‌ಟಿ ವಿಷಯದಲ್ಲಿ ಅವರೆತ್ತಿದ ಗಟ್ಟಿ ಧ್ವನಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ಕನ್ನಡಿಗರಿಗಾಗಿ ಜಿಎಸ್‌ಟಿ ವಿಷಯದಲ್ಲಿ ಅವರೆತ್ತಿದ ಗಟ್ಟಿ ಧ್ವನಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ
ಇವೆಲ್ಲವುಗಳ ಪರಿಣಾಮವೇ ಬಿಜೆಪಿಗರಿಂದ ರಾಜಕೀಯವಾಗಿ ಟಾರ್ಗೆಟ್ ಆಗುತ್ತಿದ್ದಾರೆ. ಇದೆಲ್ಲವನ್ನು ಎದುರಿಸುವ ನೈತಿಕ ಸ್ಥೈರ್ಯ ನಮ್ಮ ಮುಖ್ಯಮಂತ್ರಿಗಳಿಗಿದೆ. ಅವರಿಗೆ ಮತ್ತಷ್ಟು ಶಕ್ತಿಯಾಗಿ ನಮ್ಮ ಪಕ್ಷ, ಹಾಗೂ ಪ್ರತಿಯೊಬ್ಬ ಕನ್ನಡಿಗರು ನಿಲ್ಲಲಿದ್ದಾರೆ, ಅಹಿಂದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗಿದ ಬಿಜೆಪಿ ನಾಯಕರು ಅವರ ವಿರುದ್ಧ ರಾಜಕೀಯ ಪಿತೂರಿ ನಡೆಸಿದ್ದಾರೆ, ಇದನ್ನು ಕಾಂಗ್ರೆಸ್ ಪಕ್ಷವು ಸಹ ರಾಜಕೀಯವಾಗಿ ಎದುರಿಸಲಿದೆ, ಕಳಂಕರಹಿತ ರಾಜಕೀಯ ಬದುಕು ನಡೆಸಿರುವ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ರಾಜ್ಯದ ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಹುನ್ನಾರ ನಡೆಸಿದೆ. ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ, ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸಲಿದ್ದಾರೆ ಎಂದರು.