ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕನ್ನಡ ಓದಲು ಬಾರದ ಸಚಿವರೇ ಸರ್ಕಾರಕ್ಕೆ ಕಳಂಕ

01:30 AM Jun 30, 2024 IST | Samyukta Karnataka

ಬಾಗಲಕೋಟೆ: ರಾಜ್ಯದಲ್ಲಿ ಕನ್ನಡ ಓದಲು ಬಾರದ ಶಿಕ್ಷಣ ಸಚಿವರು ಇರುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ. ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದ್ದಾರೆ.
ನವನಗರದ ಅಂಬೇಡ್ಕರ್ ಭವನದ ದಿ. ರಾಮ ಮನಗೂಳಿ ಪ್ರಧಾನ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುರೋಪ್‌ನಲ್ಲಿ ೩೨ ರಾಷ್ಟ್ರಗಳಿದ್ದರೂ ಎಲ್ಲಿಯೂ ಇಂಗ್ಲಿಷ್ ಬಳಕೆಯಲ್ಲಿ ಇಲ್ಲ. ಇಂಗ್ಲಿಷ್ ಬಳಕೆ ಆಗುವುದು ಲಂಡನ್‌ನಲ್ಲಿ ಮಾತ್ರ. ಆದರೆ ನಮ್ಮ ದೇಶದಲ್ಲಿ ಇಂಗ್ಲಿಷ್ ಇಲ್ಲದೆ ಜ್ಞಾನವಿಲ್ಲ ಎಂಬಂತೆ ಶಿಕ್ಷಣದಲ್ಲಿ ಬಿಂಬಿಸಲಾಗುತ್ತಿದೆ. ಕನ್ನಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆದರೆ ಶಾಲೆಗಳನ್ನೇ ಮುಚ್ಚುವ ಕೆಟ್ಟ ಆಡಳಿತಗಳನ್ನು ನೋಡಿದ್ದೇವೆ. ಈಗ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ ಆದವರಿಗೆ ಕನ್ನಡ ಓದಲು ಬರುವುದಿಲ್ಲ. ಇಂಗ್ಲಿಷ್ ಮಾನಸಿಕತೆಯನ್ನು ಹೊಂದಿರುವ ಅವರು ಉದ್ದ ಕೂದಲು ಬಿಟ್ಟಿದ್ದೀರಲಾ ಎಂದರೆ, ಮೋದಿ ಗಡ್ಡ ಬಿಟ್ಟಿಲ್ಲವೇ ಎನ್ನುತ್ತಾರೆ. ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ವರ್ತಿಸುವ ಅವರನ್ನು ಆ ಖಾತೆಯಿಂದ ಕೆಳಗಿಳಿಸುವಂತೆ ನೀವಾದರೂ ಒತ್ತಾಯಿಸಿ ಎಂದು ವೇದಿಕೆಯಲ್ಲಿದ್ದ ಶಾಸಕ ಎಚ್.ವೈ.ಮೇಟಿ ಅವರಿಗೆ ಕೋರಿದರು.
ಗಟ್ಟಿಯಾಗಬೇಕಿತ್ತು ಲಿಂಗಾಯತ ಧರ್ಮ:
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರಿಂದ ಆರಂಭವಾದ ಲಿಂಗಾಯತ ಧರ್ಮ ಸಮಾನತೆಯನ್ನು ಸಾರಿದೆ. ಈ ಧರ್ಮ ಶೋಷಿತರು, ಹಿಂದುಳಿದವರ ಚಳವಳಿ ಆಗಿತ್ತು. ಅದು ಬೇರು ಮಟ್ಟದಲ್ಲಿ ಗಟ್ಟಿಯಾಗಿ ಹಬ್ಬಿದ್ದರೆ ನಾವು ದೇಶದಲ್ಲಿ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಗಳನ್ನು ಕಾಣುತ್ತಿರಲಿಲ್ಲ ಎಂದು ಹೇಳಿದರು.
ಮಕ್ಕಳಿಗೆ ಕನ್ನಡದ ಹೆಮ್ಮೆ ವಚನ ಸಾಹಿತ್ಯವನ್ನು ಕಲಿಸುವ ಕೆಲಸವಾಗಬೇಕಿದೆ. ಕನ್ನಡದಲ್ಲಿ ಭಾವನೆ, ಪ್ರೀತಿಯಿದೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಭಾವಜೀವಗಳಾಗುತ್ತಾರೆ. ಇಂಗ್ಲಿಷ್‌ನಲ್ಲಿ ಅನಿಸಿದನ್ನು ವ್ಯಕ್ತಪಡಿಸುವುದಕ್ಕೆ ಸೀಮಿತ ಪದಗಳಿರುತ್ತದೆ. ಆದರೆ ಕನ್ನಡ ಭಾಷೆ ವಿಶಾಲವಾಗಿದೆ ಎಂದು ಹೇಳಿದರು.

Next Article