ಕನ್ನಡ ಸಾಹಿತ್ಯ ಪರಿಷತ್ತು ಬಗ್ಗೆ ಗೌರವವಿರಲಿ - ದರಸಗುಪ್ಪೆ ಧನಂಜಯ
ಶ್ರೀರಂಗಪಟ್ಟಣ : ಕನ್ನಡ ನಾಡು -ನುಡಿಯ ಏಳ್ಗೆಗಾಗಿ ಶ್ರಮಿಸುತ್ತಿರುವ ಶತಮಾನದ ಇತಿಹಾಸವಿರುವ ಕನ್ನಡದ ಪ್ರಾತಿನಿಧಿಕ ಸಂಸ್ಥೆ 'ಕನ್ನಡ ಸಾಹಿತ್ಯ ಪರಿಷತ್ತು' ಪರಿಷತ್ತಿನ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಗೌರವವಿರಲಿ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಅಭಿಪ್ರಾಯಪಟ್ಟರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅರಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ಆಯೋಜನೆ ಮಾಡಿದ್ದ, "ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ"ಯ ಪ್ರಯುಕ್ತ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಶತಮಾನದ ಇತಿಹಾಸವುಳ್ಳ,ಸುಮಾರು 5 ಲಕ್ಷದಷ್ಟು ಸದಸ್ಯರನ್ನು ಹೊಂದಿರುವ, ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಘಟಕಗಳಲ್ಲದೇ, ಹೊರನಾಡು ಹಾಗೂ ಗಡಿನಾಡುಗಳಲ್ಲಿಯೂ ಘಟಕಗಳನ್ನು ಹೊಂದಿರುವ, ಭಾಷೆಯ ಏಳ್ಗೆಗಾಗಿ ಶ್ರಮಿಸುತ್ತಿರುವ ವಿಶ್ವದಲ್ಲಿಯೇ ಏಕೈಕ ಸಂಸ್ಥೆ "ಕನ್ನಡ ಸಾಹಿತ್ಯ ಪರಿಷತ್ತು" ಎಂದರೆ ಬಹುಶಃ ತಪ್ಪಾಗಲಾರದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗಿ ರೂಪುಗೊಂಡಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ 25ಮಂದಿ ಸೇವೆ ಸಲ್ಲಿಸಿ, ಡಾ. ನೋಡೋಜ ಮಹೇಶ ಜೋಷಿ ರವರು ಪ್ರಸ್ತುತ 26ನೇ ರಾಜ್ಯಾಧ್ಯಕ್ಷರಾಗಿದ್ದಾರೆ. ಇದುವರೆವಿಗೂ 86 ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದು,87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಶ್ರೀರಂಗಪಟ್ಟಣ ಕ.ಸಾ.ಪ. ಮಾಜಿ ಅಧ್ಯಕ್ಷ ಅ.ಸೋಮಶೇಖರ್ ಅರಕೆರೆ ಉದ್ಘಾಟನೆ ಮಾಡಿದರು.
ಶಿಕ್ಷಕ ಎ.ಆರ್.ಅನಿಲ್ ಬಾಬು ಅರಕೆರೆ ಮಾತನಾಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭ ವಾದoದಿನಿಂದ ತಹಲ್ ವರೆಗಿನ ಬೆಳವಣಿಗೆ -ಪ್ರಸ್ತುತ ಸ್ಥಿತಿ -ಗತಿ, ಸಮ್ಮೇಳನಗಳು, ಗೋಷ್ಠಿಗಳು, ಪ್ರಕಟಣೆ ಗಳು, ದತ್ತಿ ಗೋಷ್ಠಿ, ಸನ್ಮಾನ, ಅಭಿನಂದನೆಗಳು, ಇನ್ನಿತರೇ ವಿಚಾರಗಳ ಬಗ್ಗೆ ಸುಧಿರ್ಘವಾಗಿ ಮಾಹಿತಿಯನ್ನು ನೀಡಿದರು.
ಶ್ರೀರಂಗಪಟ್ಟಣ ತಾ.ಕ.ಸಾ.ಪ ಅಧ್ಯಕ್ಷ. ಬಿ..ಮಂಜುನಾಥ್ ಬಲ್ಲೇನಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಯ ಸಲುವಾಗಿ ತಾಲೂಕಿನಾಧ್ಯoತ ಜಿಲ್ಲೆಯ ಹಿರಿಯ ಕವಿಗಳ-ಕಾವ್ಯಗಳ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಮಹಿಳಾ ಮಂಡಳಿಯ ಸುಮಾ, ಗ್ರಾ..ಪಂ. ಸದಸ್ಯೆ ಮೀನಾ.ಟಿ. ಎಚ್. ಶಿವಕುಮಾರ ಅರಕೆರೆ,ಕೊ. ನಾ. ಪುರುಷೋತ್ತಮ್,ಪಾಲಹಳ್ಳಿ ಶೇಖರ್, ನಗರ ಘಟಕದ ಅಧ್ಯಕ್ಷೆ ಎನ್.ಸರಸ್ವತಿ ಶ್ರೀರಂಗಪಟ್ಟಣ ರವರು ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಹಿರಿಯ ಸದಸ್ಯರಾದ ಕೆ.ಪುಟ್ಟಸ್ವಾಮಿ ರವರನ್ನು ಕಸಾಪ. ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅರಕೆರೆ ಡೈರಿ ಅಧ್ಯಕ್ಷ ಪ್ರಕಾಶ್, ಶ್ರೀಧರ್, ದೀಪು, ಎಂ. ಜಗದೀಶ್ ಕುಮಾರ್, ಎ. ಪಿ ರವಿ, ಎಂ. ಬಿ.ಅನಂತಯ್ಯ, ಹರೀಶ್ ಬಳ್ಳೆಕೆರೆ,ಹಾಗೂ ಇತರರು ಉಪಸ್ಥಿತರಿದ್ದರು.
ಅರಕೆರೆ ಹೋಬಳಿ ಘಟಕದ ಅಧ್ಯಕ್ಷ ರಾಮಕೃಷ್ಣ ಸರ್ವರನ್ನೂ ಸ್ವಾಗತಿಸಿ ನಿರೂಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಕ.ಸಾ.ಪ 110 ಎಂದು ನಮೂದಿಸಿರುವ ಕೇಕ್ ಕತ್ತರಿಸಿ ಸಂಭ್ರಮಿಸಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.