For the best experience, open
https://m.samyuktakarnataka.in
on your mobile browser.

ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾದ ಸರ್ಕಾರ

10:42 AM Jan 30, 2025 IST | Samyukta Karnataka
ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾದ ಸರ್ಕಾರ

ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾಗುವ ಮೂಲಕ ಎಂದಿನಂತೆ ತನ್ನ ಕನ್ನಡ ವಿರೋಧಿ ನಿಲುವು

ಬೆಂಗಳೂರು: ಕೇರಳ ಸರ್ಕಾರ ಕಾಸರಗೂಡಿನಲ್ಲಿ ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾಗುವ ಮೂಲಕ ಎಂದಿನಂತೆ ತನ್ನ ಕನ್ನಡ ವಿರೋಧಿ ನಿಲುವು ತಾಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಅಡಿದ್ದು ಕನ್ನಡ ಬಲ್ಲ ಸಿಬ್ಬಂದಿ ನೇಮಕದ ಸಂಖ್ಯೆ ಕನಿಷ್ಠಗೊಳಿಸಲು ಆದೇಶ ಹೊರಡಿಸಿರುವ ಕೇರಳ ಸರ್ಕಾರದ ನಡೆ ಅತ್ಯಂತ ಖಂಡನೀಯ. ನೆಲ, ಜಲ, ಭಾಷೆ, ಗಡಿ ವಿಷಯಗಳೂ ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ನಿರಂತರ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸುವ ಕೇರಳ ಸರ್ಕಾರ ಕಾಸರಗೂಡಿನಲ್ಲಿ ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾಗುವ ಮೂಲಕ ಎಂದಿನಂತೆ ತನ್ನ ಕನ್ನಡ ವಿರೋಧಿ ನಿಲುವು ತಾಳಿದೆ.

ಕೇರಳದಲ್ಲಿ ಆನೆ ತುಳಿತಕ್ಕೊಳಗಾದಾಗ ಆನೆ ಕರ್ನಾಟಕದ್ದು ಎಂಬ ಸಬೂಬು ನೀಡಿ ಪರಿಹಾರ ಕೊಟ್ಟ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗ ಕನ್ನಡ, ಕನ್ನಡಿಗರಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಬದ್ಧತೆಯಿಂದ ಮಧ್ಯ ಪ್ರದೇಶಿಸಿ ಸಮಸ್ಯೆ ಬಗೆಹರಿಸಲಿ ಎಂದಿದ್ದಾರೆ.

Tags :