For the best experience, open
https://m.samyuktakarnataka.in
on your mobile browser.

ಕರಟಕ ದಮನಕಕ್ಕೆ ಉಪೇಂದ್ರ ಅವರ ‘ಡೀಗ ಡಿಗರಿ’

09:24 PM Feb 10, 2024 IST | Samyukta Karnataka
ಕರಟಕ ದಮನಕಕ್ಕೆ ಉಪೇಂದ್ರ ಅವರ ‘ಡೀಗ ಡಿಗರಿ’

ಬೆಂಗಳೂರು: ಯೋಗರಾಜ್‌ ಭಟ್‌ ಸಾಹಿತ್ಯ ಮತ್ತು ನಿರ್ದೇಶನದ ಕರಟಕ ದಮನಕ ಸಿನಿಮಾದ ‘ಡೀಗ ಡಿಗರಿ’ ಹಾಡು ಅಬುಧಾಬಿಯಲ್ಲಿ ಬಿಡುಗಡೆಯಾಗಿದೆ.
ಉಪೇಂದ್ರ ಹಾಗೂ ರಾಜೇಶ್ ಕೃಷ್ಣನ್ ಕಂಠದಲ್ಲಿ ಮೂಡಿಬಂದ ‘ಡೀಗ ಡಿಗರಿ’ ಹಾಡಿಗೆ ಯೋಗರಾಜ್ ಭಟ್ ಅವರ ಸಾಹಿತ್ಯವಿದ್ದು, ವಿ.ಹರಿಕೃಷ್ಣ ಅವರ ಸಂಗೀತವಿದೆ, ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಕರಟಕ-ದಮನಕ ಸಿನಿಮಾ ಮಾರ್ಚ್ 8ರಂದು ಶಿವರಾತ್ರಿಯ ಹಬ್ಬದ ಸಂಭ್ರಮಾಚರಣೆಯೊಂದಿಗೆ ಥಿಯೇಟರ್‌ಗೆ ಬರಲಿದೆ, ಶಿವರಾಜ್‌ ಕುಮಾರ್‌ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್‌ ನಟಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್‌, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಹುನಿರೀಕ್ಷಿತ “ಕರಟಕ ದಮನಕ” ಚಿತ್ರದ ಈ ಹಾಡು ನಿಮಗಾಗಿ….