ಕರಸೇವಕ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರು: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಚಿಕ್ಕಮಗಳೂರಿನಲ್ಲೂ ನಡೆಯಿತು.
ನಗರದ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯಲ್ಲಿ 1992 ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟ ವೇಳೆ ದಾಖಲಾಗಿದ್ದ ಹಳೇ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟ ಶ್ರೀಕಾಂತ್ ಪೂಜಾರಿಯವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಮೆರವಣಿಗೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯದೆಲ್ಲೆಡೆ ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಜಿಲ್ಲಾ ಕೇಂದ್ರದಲ್ಲೂ ನಡೆದಿದ್ದು, ತಕ್ಷಣ ಶ್ರೀಕಾಂತ್ ಪೂಜಾರಿ ಬಿಡುಗಡೆಗೊಳಿಸಲು ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ ಇದೇ ರೀತಿ ಹಿಂದುಗಳ ಮೇಲೆ ಪ್ರಹಾರ ನಡೆಸಿದರೆ ರಾಮನ ಅವಕೃಪೆಗೆ ಒಳಗಾಗುತ್ತೀರಾ ಎಂದು ಹೇಳಿದರು. ಹಿಂದುಗಳ ಮೇಲೆ ಇದೇ ರೀತಿ ದಬ್ಬಾಳಿಕೆ ಮುಂದುವರಿಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು. ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಬೆಳವಾಡಿ ರವೀಂದ್ರ ಸಿದ್ದರಾಮಯ್ಯ ಯಾವ ಧೋರಣೆ ಅನುಸರಿಸುತ್ತಿದ್ದೀರಾ ಮುಸ್ಲಿಂರ ಬಗ್ಗೆ ನಿಮ್ಮ ನಿಲುವೆ ಬೇರೆ ರಾಮಮಂದಿರ ಕಟ್ಟಲು ದುಡ್ಡು ಕೊಡಲ್ಲ ಎನ್ನುವ ನೀವು ಧರ್ಮ ವಿರೋಧಿ ನಿಮಗೇಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಏಕೆ ಕೊಡಬೇಕು ಎಂದು ರವೀಂದ್ರ ಬೆಳವಾಡಿ ವಾಗ್ದಾಳಿ ನಡೆಸಿದರು.