For the best experience, open
https://m.samyuktakarnataka.in
on your mobile browser.

ಕರ್ನಾಟಕಕ್ಕೆ ಬಂತು ಫ್ಲಿಕ್ಸ್ ಬಸ್!

02:15 PM Sep 03, 2024 IST | Samyukta Karnataka
ಕರ್ನಾಟಕಕ್ಕೆ ಬಂತು ಫ್ಲಿಕ್ಸ್ ಬಸ್

ಬೆಂಗಳೂರು: 40ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಫ್ಲಿಕ್ಸ್ ಬಸ್ ಈಗ ಕರ್ನಾಟಕಕ್ಕೆ ಬಂದಿದೆ.
ಈ ವಿಷಯವನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸುಗಮ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಜರ್ಮನ್ ದೇಶದ ಪ್ರತಿಷ್ಠಿತ ಫ್ಲಿಕ್ಸ್ ಬಸ್ ನಮ್ಮ ಬೆಂಗಳೂರಿನಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಈ ದಿನ ಹಸಿರು ನಿಶಾನೆ ತೋರಿದ್ದು, ಸಂತಸ ತರಿಸಿದೆ. ಈಗಾಗಲೇ 40+ ದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಫ್ಲಿಕ್ಸ್ ಬಸ್ ಇದೇ ಮೊದಲಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಸೇವೆಗಳನ್ನು ಆರಂಭಿಸುತ್ತಿದೆ. ‘ಕರ್ನಾಟಕ - ಒಂದು ರಾಜ್ಯ, ಹಲವು ಜಗತ್ತಿಗೆ’ ಸುಸ್ವಾಗತ! ಎಂದಿದ್ದಾರೆ.

Tags :