For the best experience, open
https://m.samyuktakarnataka.in
on your mobile browser.

ಕರ್ನಾಟಕಕ್ಕೆ ಮತ್ತಷ್ಟು ಸ್ಟಾರ್ಟಪ್

10:53 AM Dec 05, 2024 IST | Samyukta Karnataka
ಕರ್ನಾಟಕಕ್ಕೆ ಮತ್ತಷ್ಟು ಸ್ಟಾರ್ಟಪ್

ಬೆಂಗಳೂರು: ಬವೇರಿಯನ್ ಸಚಿವರೊಂದಿಗೆ ಬಯೋಟೆಕ್ ಮತ್ತು ಸ್ಟಾರ್ಟಪ್’ಗಳ ಕುರಿತು ಫಲಪ್ರದ ಚರ್ಚೆ ನಡೆಸಿರುವುದಾಗಿ ಸಚಿವ ಎಂ. ಬಿ. ಪಾಟೀಲ್‌ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಯುರೋಪಿಯನ್ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಬವೇರಿಯನ್ ರಾಜ್ಯ ಸಚಿವರೊಂದಿಗೆ ಫಲಪ್ರದ ಚರ್ಚೆ ನಡೆಸಿದೆ. ಬಯೋಟೆಕ್, ಸ್ಟಾರ್ಟ್ಅಪ್’ಗಳು ಮತ್ತು ನುರಿತ ಕಾರ್ಮಿಕ ವಿನಿಮಯದಂತಹ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತಂತೆ ಮಾತುಕತೆ ನಡೆಸಿದೆವು. ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ನಿರ್ದಿಷ್ಟ ಒಪ್ಪಂದಗಳಿಗೆ ಸಹಿ ಹಾಕುವ ಅವಕಾಶಗಳನ್ನು ಪರಿಶೀಲಿಸಿದ್ದೇವೆ ಮತ್ತು ಇನ್ನಷ್ಟು ಸಹಯೋಗ ಸಾಧ್ಯತೆಗಳನ್ನು ಚರ್ಚಿಸಿದ್ದೇವೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬವೇರಿಯಾವನ್ನು ಪ್ರಮುಖ ನಿಯೋಗದೊಂದಿಗೆ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದೇನೆ. ಸಚಿವರು ಮುಂದಿನ ವರ್ಷ ಕರ್ನಾಟಕಕ್ಕೆ ಭೇಟಿ ನೀಡುವ ತಮ್ಮ ಯೋಜನೆಯನ್ನು ಹಂಚಿಕೊಂಡು ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಆಸಕ್ತಿ ವ್ಯಕ್ತಪಡಿಸಿದರು ಎಂದಿದ್ದಾರೆ.

Tags :