For the best experience, open
https://m.samyuktakarnataka.in
on your mobile browser.

ಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ

09:23 PM Jun 02, 2024 IST | Samyukta Karnataka
ಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ

ಬೆಂಗಳೂರು: ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸ ತಜ್ಞರಾಗಿ ಖ್ಯಾತರಾಗಿದ್ದ ಕೆಳದಿ ಗುಂಡಾ ಜೋಯಿಸ್ ವಯೋಸಹಜವಾಗಿ ತಮ್ಮ 94ರ ಇಳಿವಯಸ್ಸಿನಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು.
ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದ ಇವರು ಹಳೆಯ ಕಾಲದ ಮೋಡಿ ಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಇವರು ಒಬ್ಬರಾಗಿದ್ದರು ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕನ್ನಡ ನಾಡಿನ ಶ್ರೇಷ್ಠ ಇತಿಹಾಸ ವಿದ್ವಾಂಸರಾದ ಡಾ. ಕೆಳದಿ ಗುಂಡಾ ಜೋಯಿಸರು ಕೆಳದಿ ಇತಿಹಾಸವನ್ನು ವಿಶ್ವಪ್ರಸಿದ್ಧ ಮಾಡುವಲ್ಲಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇತಿಹಾಸ ಮತ್ತು ಲಿಪಿ ಕ್ಷೇತ್ರದಲ್ಲಿ ಅವರ ಸಾಧನೆಗಳು ಹಿರಿಯವು. ಶ್ರೀಯುತರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 18ನೇ ವಾರ್ಷಿಕ ಸಮ್ಮೇಳನ  ಸರ್ವಾಧ್ಯಕ್ಷರಾಗಿದ್ದರು. ೨೦೧೮ರಲ್ಲಿ ಬಾದಾಮಿಯಲ್ಲಿ ನಡೆದ 32ನೇ ವಾರ್ಷಿಕ ಸಮ್ಮೇಳನದಲ್ಲಿ 'ಇತಿಹಾಸ ಸಂಸ್ಕೃತಿ ಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದರು.

ಅರಕಲಗೂಡು ರಾಜ ಪುರೋಹಿತ ಎಂದೆ ಹೆಸರಾಗಿದ್ದ  ಅವರು  ಅರಕಲಗೂಡು ದಸರಾ ಉತ್ಸವದ ಸಂದರ್ಭ ಬನ್ನಿ ಪೂಜೆ, ಕದಳಿ ವೃಕ್ಷ ಛೇದನ ಸಂದರ್ಭ ಪ್ರಧಾನವಾಗಿ ವಿಧಿಗಳನ್ನು ನೆರವೇರಿಸುವ ತಂಡದ ಮಾರ್ಗದರ್ಶಿಯಾಗಿದ್ದರು.