For the best experience, open
https://m.samyuktakarnataka.in
on your mobile browser.

ಕರ್ನಾಟಕವು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಲಿದೆ

10:44 AM Aug 24, 2024 IST | Samyukta Karnataka
ಕರ್ನಾಟಕವು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಲಿದೆ

ಬೆಂಗಳೂರು: ಭಾರತದ ಅತಿದೊಡ್ಡ ಆರ್‌&ಡಿ ಹೂಡಿಕೆಯೊಂದನ್ನು ಗಳಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಅತ್ಯಾಧುನಿಕ ಆರ್‌&ಡಿ ಕೇಂದ್ರ "ಎಂಜಿನ್" (ENGINE) ಸ್ಥಾಪಿಸಲು ಚೆವ್ರಾನ್ ಸಂಸ್ಥೆ ರಾಜ್ಯದಲ್ಲಿ ರೂ. 8,300 ಕೋಟಿ ($1 ಬಿಲಿಯನ್) ಹೂಡಿಕೆ ಮಾಡಲಿದೆ. ಈ ಮಹತ್ತರ ಹೂಡಿಕೆ ನಮ್ಮ ರಾಜ್ಯದ ಉದ್ಯಮ ಮತ್ತು ವ್ಯವಹಾರಸ್ನೇಹಿ ನೀತಿಗಳ ಸಫಲತೆಯನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. 2025 ರ ವೇಳೆಗೆ 600+ ಎಂಜಿನಿಯರಿಂಗ್ ಉದ್ಯೋಗಗಳನ್ನು ಸೃಷ್ಟಿಸಲಿದೆ. ಕರ್ನಾಟಕವು ಜಾಗತಿಕ ತಂತ್ರಜ್ಞಾನದ ‘ಹಬ್’ ಆಗಿ, ಜ್ಞಾನ ಮತ್ತು ತಂತ್ರಜ್ಞಾನ- ನಾಯಕತ್ವದ R&D ಮತ್ತು ಉತ್ಪಾದನಾ ಕೇಂದ್ರವಾಗಲಿದೆ. ಭವಿಷ್ಯದ 500 ಕಂಪನಿಗಳು ಮತ್ತು 500 GCC ಗಳಿಗೆ ನೆಲೆಯಾಗಲಿದೆ. ಭಾರತದ #ಚೆವ್ರಾನ್ ಮುಖ್ಯಸ್ಥರಾದ ಶ್ರೀ ಅಕ್ಷಯ್‌ ಸಾಹ್ನಿ ಅವರೊಂದಿಗೆ ಶುಕ್ರವಾರ ಮಹತ್ವದ ಸಭೆ ನಡೆಸಿದೆ. ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದ್ದು, ಮತ್ತಷ್ಟು ಸದೃಢತೆಯಿಂದ ಮುನ್ನಡೆಯಲಿದೆ . ನವೀನ ನೀತಿಗಳು ಮತ್ತು ಮಹತ್ವಾಕಾಂಕ್ಷಿ ಯೋಜನೆಗಳೊಂದಿಗೆ ಕರ್ನಾಟಕದ ಪರಿಸರ ವ್ಯವಸ್ಥೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು #ನಮ್ಮಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

Tags :