ಕರ್ನಾಟಕ ಏಕೀಕರಣಕ್ಕೂ ಮಂಡ್ಯದ ಕೊಡುಗೆ ಅಪಾರ
ಮಂಡ್ಯ: ಸ್ವಾತಂತ್ರ್ಯ ಹೋರಾಟದ ಜೊತೆಗೆ ಕರ್ನಾಟಕದ ಏಕೀಕರಣಕ್ಕೂ ಮಂಡ್ಯ ಜಿಲ್ಲೆ ಮಹತ್ವದ ಕೊಡುಗೆ ನೀಡಿದೆ. ಸಹುಕಾರ್ ಚನ್ನಯ್ಯ ಹಾಗೂ ಕುವೆಂಪು ಅವರು ಇಬ್ಬರೂ ಇಲ್ಲದಿದ್ದರೆ ಕರ್ನಾಟಕದ ಏಕೀಕರಣ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಸಾಂಸ್ಕೃತಿಕ ಟಸ್ಟ್, ಮಂಡ್ಯ ಕರ್ನಾಟಕ ಸಂಘದ ಜೊತೆಗೂಡಿ ಕೊಡಮಾಡುವ 27ನೇ ವರ್ಷದ ದೇವಮ್ಮ ಇಂಡವಾಳು ಎಚ್. ಹೊನ್ನಯ್ಯ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಮತ್ತು ಎಚ್. ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು.
ಇದೊಂದು ಅಪರೂಪವಾಗಿರುವ ಹೃದಯಸ್ಪರ್ಷಿ ಕಾರ್ಯಕ್ರಮ, ಇಲ್ಲಿ ನಮ್ಮ ಇತಿಹಾಸ ಇದೆ. ಪರಂಪರೆ, ನಮ್ಮ ಪ್ರಸ್ತುತತೆ ಇದೆ. ಅದರೊಂದಿಗೆ ನಮ್ಮ ಭವಿಷ್ಯವೂ ಇದೆ. ಈ ಮೂರು ಕಾಲಗಳ ಸಂಗಮ ಈ ಪಶಸ್ತಿ ಪ್ರದಾನ ಸಮಾರಂಭ. ಜಯಪ್ರಕಾಶ ಗೌಡರ ನೇತೃತ್ವದಲ್ಲಿ ಒಂದು ಸತ್ಯ, ಸಾತ್ವಿಕ ಚಿಂತನೆ ಇರುವವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬಹಳ ಮಹತ್ವ ಬಂದಿದೆ ಎಂದರು.
ಮಂಡ್ಯ ಆಂದರೆನೇ ವಿಶೇಷ. ಮಂಡ್ಯ ಇಸ್ ಇಂಡಿಯಾ ಅಂತ ಹೇಳುತ್ತಾರೆ. ಅದು ಹಲವಾರು ರೀತಿಯಲ್ಲಿ ಸತ್ಯ ಇದೆ. ಮಂಡ್ಯ ಇಸ್ ಮೋರ್ ದ್ಯಾನ್ ಇಂಡಿಯಾ ಯಾಕೆಂದರೆ, ಮಂಡ್ಯದಲ್ಲಿ ಭಾವನೆಗಳಿವೆ. ಒಂದು ಪ್ರದೇಶದ ಜೀವಾಳ ಭಾವನೆಗಳು. ಕಟ್ಟಡಗಳು, ರಸ್ತೆಗಳು, ಆಸ್ತಿಗಳು, ಅಭಿವೃದ್ಧಿ ಕಾರ್ಖಾನೆ ಒಂದು ಭಾಗ. ಅದು ನಾಗರಿಕತೆ ಒಂದು ಭಾಗ. ಆದರೆ, ಈ ನಾಡು ನಮ್ಮದು. ಈ ನೆಲ ನಮ್ಮದು ಎನ್ನುವ ಭಾವನೆ ಅದು ಸ್ವಾರ್ಥದ ಪ್ರತೀಕ ಅಲ್ಲ. ಅದು ಪ್ರೀತಿಯ ಪ್ರತೀಕ. ಅಂತಹ ಒಂದು ಭಾವನೆ ಮಂಡ್ಯದಲ್ಲಿ ನಾನು ಕಾಣುತ್ತೇನೆ.
ಆ ಪ್ರೀತಿ ಇರುವುದರಿಂದಲೇ ನೀವು ಸಂಘರ್ಷವನ್ನೂ ಮಾಡುತ್ತೀರಿ. ಪ್ರೀತಿಯನ್ನೂ ಮಾಡುತ್ತೀರಿ. ಯಾರು ನೆಲೆಗಟ್ಟಿಗೆ ಸ್ಪಂದಿಸುತ್ತಾರೆ ಅವರನ್ನು ಪ್ರೀತಿಸುತ್ತೀರಿ. ಯಾರು ಸ್ಪಂದಿಸುವುದಿಲ್ಲ ಅವರೊಂದಿಗೆ ಸಂಘರ್ಷ ಮಾಡುತ್ತೀರಿ. ಇದೇ ನನಗೆ ಪ್ರತಿ ಬಾರಿ ಮಂಡ್ಯಕ್ಕೆ ಬಂದಾಗ ಸ್ಫೂರ್ತಿ ಕೊಡುತ್ತದೆ ಎಂದರು.
ಇಲ್ಲಿ ಹಲವಾರು ವಿಚಾರಗಳನ್ನು ಪಸ್ತಾಪ ಮಾಡಿದ್ದಾರೆ. ಅದು ನನ್ನ ಸಾಧನೆ ಅಂಥ ಹೇಳಿಕೊಳ್ಳುವುದಿಲ್ಲ. ಅದೊಂದು ಜವಾಬ್ದಾರಿ ಕಾಯಕಕ್ಕೂ, ಕರ್ತವ್ಯಕ್ಕೂ ವ್ಯತ್ಯಾಸ ಇದೆ. ಯಾವುದನ್ನು ನಮಗೆ ವಹಿಸಿದ್ದಾರೆ. ಅದು ಕರ್ತವ್ಯ ಅದನ್ನು ಮೀರಿ ಕರ್ತವ್ಯದಲ್ಲಿ ಬಂದಿರುವುದನ್ನು ಇಲ್ಲದವರಿಗೆ ಹಂಚಿಕೊಳ್ಳುವುದು ಅವರಿಗೆ ಆಶ್ರಯ ಕೊಡುವುದು ಕಾಯಕ. ಅದು ಕರ್ತವ್ಯ ಮೀರಿದ್ದು. ಅದು ಪರಿಪೂರ್ಣತೆ ಆಗುತ್ತದೆ ಎಂದು ಹೇಳಿದರು.