ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಉಪ ಸಮಿತಿ ತೀರ್ಮಾನ ಕುರಿತು ಪರಿಶೀಲನೆ

06:28 PM Dec 18, 2024 IST | Samyukta Karnataka

ಬೆಳಗಾವಿ (ಸುವರ್ಣಸೌಧ): ಕರಾವಳಿ ಭಾಗದ ಕಾನೆ, ಬಾನೆ, ಕುಮ್ಕಿ ಮತ್ತು ಇನ್ನೀತರ ಭೂಮಿಗಳ ಬಗ್ಗೆ ಸದಸ್ಯರಾದ ಪ್ರತಾಪ ಸಿಂಹ ನಾಯಕ ಕೆ ಅವರು ಡಿ.18ರಂದು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದರು.
ಪ್ರಶ್ನೋತ್ತರ ವೇಳೆ, ಸದಸ್ಯರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವರಾದ‌ ಕೃಷ್ಣ ಭೈರೇಗೌಡ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 79(2) ರಲ್ಲಿರುವ ಜಮೀನುಗಳು ವಿಶೇಷಾಧಿಕಾರಗಳನ್ನು ಮುಂದುವರಿಸಿ, ಅವುಗಳನ್ನು ಅಧಿಭೋಗದಾರರಿಗೆ ಅವರ ಹಿಡುವಳಿ ಜಮೀನನ್ನು ಹೊರತುಪಡಿಸಿ 5 ಎಕರೆಗೆ ಮೀರದಂತೆ ಸರ್ಕಾರವು ನಿರ್ಧರಿಸಬಹುದಾದಂತಹ ಗುತ್ತಿಗೆ ಮೌಲ್ಯವನ್ನು ವಿಧಿಸಿ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಅನುವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ಕ್ಕೆ ತಿದ್ದುಪಡಿ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಗೋಮಾಳ, ಗಾಯರಾಣ, ಹುಲ್ಲಬನ್ನಿ. ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿಯೊಂದನ್ನು ರೂಪಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವಿವಿಧ ದಿನಾಂಕಗಳಂದು ಸಭೆ ನಡೆಸಿದೆ.24.01.2023ರಂದು ನಡೆದ ಸಭೆಯಲ್ಲಿ ಉಪ ಸಮಿತಿಯು ಕಾಯ್ದೆಯ ತಿದ್ದುಪಡಿ ತರುವ ಬಗ್ಗೆ ತೆಗೆದುಕೊಂಡ ತೀರ್ಮಾನ ಅನುಷ್ಠಾನಗೊಳಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಸರ್ಕಾರವು ಪರಿಶೀಲಿಸಲಿದೆ ಎಂದು ಸಚಿವರು ಇದೆ ವೇಳೆ ಸ್ಪಷ್ಟನೆ ನೀಡಿದರು.
ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಬಹುದಾದಂಥ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ರೂಢಿಯಂತೆ ಅಂಥ ಯಾವುದೇ ಆದೇಶದ ಮೇರೆಗೆ ಅನುಭೋಗಿಸಲಾಗುತ್ತಿರುವ ವಿಶೇಷಾಧಿಕಾರಗಳು ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಮ್ಮಿ ಭೂಮಿಗಳು, ಬಾಣಿ ಭೂಮಿಗಳು ಮತ್ತು ಕಾಣೆ ಭೂಮಿಗಳ ಬಗೆಗಿನ ವಿಶೇಷಾಧಿಕಾರಗಳು ಮುಂದುವರೆಯತಕ್ಕದ್ದು ಎಂದು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 79ರ (2)ರಡಿ ಕಲಂ 79 ಉಪ-ಪ್ರಕರಣ (1)ರಲ್ಲಿ ತಿಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

Tags :
#ಕೃಷ್ಣಭೈರೆಗೌಡ#ಬೆಳಗಾವಿ#ಸುವರ್ಣಸೌಧ
Next Article