ಕರ್ನಾಟಕ ಸಾರಿಗೆ ಸಂಸ್ಥೆಗೆ ಗೆಲುವು
07:37 PM Dec 15, 2023 IST
|
Samyukta Karnataka
ಬೆಂಗಳೂರು: KSRTC ಹೆಸರು ಬಳಕೆ ವಿಚಾರ ಇದೀಗ ಇತ್ಯರ್ಥವಾಗಿದೆ. ಇನ್ಮುಂದೆ ಕೆಎಸ್ಆರ್ಟಿಸಿ ಹೆಸರನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಕ್ತವಾಗಿ ಬಳಸುವ ಅವಕಾಶವನ್ನು ಮದ್ರಾಸ್ ಹೈಕೋರ್ಟ್ ನೀಡಿದೆ. ಕೆಎಸ್ಆರ್ಟಿಸಿ ಹೆಸರು ಹಾಗೂ ಲೋಗೋ ಬಳಕೆಗೆ ಕರ್ನಾಟಕಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದಿದೆ. ಇದರೊಂದಿಗೆ ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಎರಡು ವರ್ಷಗಳ ಹಿಂದೆ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮೂಲಕ ‘ಕೆಎಸ್ಆರ್ಟಿಸಿ’ ಮೇಲೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಹಕ್ಕು ಸ್ವಾಮ್ಯ ಸಾಧಿಸಿತ್ತು. ಆದರೆ, ಕರ್ನಾಟಕ ಸಾರಿಗೆಗೂ ಕೆಎಸ್ಆರ್ಟಿಸಿ ಸಂಕ್ಷಿಪ್ತ ರೂಪ ಬಳಸದಂತೆ ಹೆಚ್ಚಿನ ನಿಯಂತ್ರಣ ಇರಲಿಲ್ಲ.
Next Article