ಕಲಬುರಗಿಯಲ್ಲಿ ಎರಡು ಬರ್ಬರ ಹತ್ಯೆ
12:31 AM Dec 11, 2024 IST
|
Samyukta Karnataka
ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲೂಕಿನ ಮಾಡಬೂಳ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಗತ್ತಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿ ರೌಡಿಶೀಟರ್ ಖಲೀಲ್ ಅಹಮದ್ ಹಾಗೂ ಆತನ ಸಹಚರ ಎನ್ನಲಾಗಿರುವ ಅಮೀನ್ ಪಟೇಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ದುಷ್ಕರ್ಮಿಗಳು ಕಣ್ಣಿನಲ್ಲಿ ಚಾಕು ಚುಚ್ಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಹಮಾಲ್ ವಾಡಿಯ ನಿವಾಸಿಯಾಗಿದ್ದ ಖಲೀಲ್ ಮೇಲೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ರೌಡಿ ಶೀಟರ್ ದಾಖಲಾಗಿತ್ತು. ದರೋಡೆ ಹಲ್ಲೆ ಸೇರಿ ನಾನಾ ಪ್ರಕರಣಗಳಲ್ಲಿ ಖಲೀಲ್ ಹಾಗೂ ಆತನ ಸಹಚರರು ಭಾಗಿಯಾಗಿದ್ದರೂ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಕಮಿಷನರ್ ಸೇರಿದಂತೆ ಅಧಿಕಾರಿಗಳನ್ನು ಸಂಪರ್ಕಿಸಿದರು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.
Next Article