ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈಶಾನ್ಯ ಕರ್ನಾಟಕ ಭಾಗಕ್ಕೆ ರೆಡ್ ಹಾಗೂ ಆರೆಂಜ್ ಅಲರ್ಟ್

07:43 PM Jun 08, 2024 IST | Samyukta Karnataka

ಬೆಂಗಳೂರು: ಜೂನ್ 08 ರಿಂದ 11 ರ ವರೆಗೆ ಕಲಬುರಗಿ ಜಿಲ್ಲೆಗೆ (ಈಶಾನ್ಯ ಕರ್ನಾಟಕ ಭಾಗಕ್ಕೆ) ಭಾರತೀಯ ಹವಾಮಾನ ಇಲಾಖೆ (IMD) ಯಿಂದ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿರುವ ಕಾರಣ ಸಾರ್ವಜನಿಕರು ಹಾಗೂ ರೈತ ಬಾಂಧವರು ಮುಂಜಾಗ್ರತೆ ವಹಿಸುವಹಿಸಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರೈತರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕು. ಭಾರತೀಯ ವಾಯುಮಾನ ಇಲಾಖೆ ಶನಿವಾರ ದಿಂದ ಮಂಗಳವಾರದವರೆಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದಲ್ಲದೇ ಹವಾಮಾನದ ಪರಿಸ್ಥಿತಿಗೆ ಅನುಗುಣವಾಗಿ ಎಚ್ಚರಿಕೆಯಲ್ಲಿ ಬದಲಾವಣೆಯಾಗುತ್ತದೆ. ಹಾಗಾಗಿ, ರೈತರು ಹಾಗೂ ಸಾರ್ವಜನಿಕರು ಬದಲಾಗುತ್ತಿರುವ ಎಚ್ಚರಿಕೆಯನ್ನು ಪಾಲಿಸಬೇಕು.

ಈ ಕೆಳಕಂಡಂತೆ ಮುಂಜಾಗ್ರತೆ ವಹಿಸಲು ಸೊಚಿಸಿದೆ.

ಮಳೆಯಿಂದ ಹಾನಿಯಾಗುವ ಸಾಧ್ಯತೆಗಳು:

ಸ್ಥಳೀಯವಾಗಿ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚು ನೀರು ತುಂಬಿಕೊಳ್ಳುವ/ ಕೆಳ ಹಂತದ ರಸ್ತೆಗಳು ನೀರಿನಿಂದ ಮುಳುಗುವ ಸಾಧ್ಯತೆ ಇರುತ್ತದೆ, ರೈಲ್ವೆ/ರಸ್ತೆಯ ಕೆಳಸೇತುವೆ(Under pass) ಮುಳುಗಡೆಯಾಗಿ ರಸ್ತೆ ಬಂದಾಗುವ ಸಾದ್ಯತೆ ಇರುತ್ತದೆ. ಅತೀ ಹೆಚ್ಚಿನ ಮಳೆ ಇರುವುದರಿಂದ ವಾಹನ ಸವಾರರಿಗೆ ರಸ್ತೆ ಕಾಣದೇ ಇರುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಳೆಯಿಂದ ರಸ್ತೆಗಳು ನೀರಿನಿಂದ ತುಂಬಿಕೊಳ್ಳುವ ಕಾರಣ ಕಲಬುರಗಿ ನಗರ/ಪಟ್ಟಣ ಪ್ರದೇಶದಲ್ಲಿ ವಾಹನದಟ್ಟಣೆಯಾಗುವ ಸಾಧ್ಯತೆ ಇರುತ್ತದೆ. ಮಳೆ ನೀರಿನಿಂದ ರಸ್ತೆಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಅಪಾಯದಲ್ಲಿರುವ ಹಳೆ ಕಟ್ಟಡಗಳು ಕುಸಿಯುವ ಸಾಧ್ಯತೆಯಿರುತ್ತದೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಕೆಸರುಗದ್ದೆಯಾಗುವ ಸಾಧ್ಯತೆ ಇರುತ್ತದೆ.
ಹೆಚ್ಚಿನ ಮಳೆಯಿಂದ ನದಿಯ ಪ್ರವಾಹ ಅಗುವ ಸಾಧ್ಯತೆ ಇರುತ್ತದೆ. ಗುಡುಗು, ಮಿಂಚು ಸಹಿತ ಸಿಡಿಲು ಬೀಳುವ ಸಾಧ್ಯತೆ ಇರುತ್ತದೆ.

ಸಾರ್ವಜನಿಕರು ತೆಗೆದುಕೂಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು:

ವಾಹನ ಸವಾರರು ಅತೀ ಹೆಚ್ಚು ನೀರು ಬರುವ ಪ್ರದೇಶದ ಕಡೆಗೆ ಅಥವಾ ನದಿ ದಡಗಳಲ್ಲಿ ಸಂಚರಿಸಬಾರದು. ಸಂಚಾರಿ ನಿಯಮಗಳನ್ನು ಅನುಸರಿಸುವುದು. ಹೆಚ್ಚು ನೀರು ತುಂಬಿಕೊಳ್ಳುವ, ಕೆಳ ಹಂತದ ಹಾಗೂ ಇಳಿಜಾರು ಪ್ರದೇಶದಲ್ಲಿ ವಾಸಿಸುವವರು ಸುರಕ್ಷತೆ ಸ್ಥಳಗಳಿಗೆ ಸ್ಥಳಾಂತರಗೊಳ್ಳುವುದು.

ಹಳೆಯ ಕಟ್ಟಡ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸಬಾರದು. ಸಿಡಿಲು ಬೀಳುವ ಸಂಭವವಿರುವುದರಿಂದ ದನಕರಗಳನ್ನು ಸುರಕ್ಷಿತ ಜಾಗಗಳಲ್ಲಿ ಇರಿಸುವುದು ಹಾಗೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಬಾರದು.

ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದ ಹಾಗೆ ಮುನ್ನಚ್ಚರಕೆವಹಿಸುವುದು.
ನಿರಂತರ ಹೆಚ್ಚಿನ ಮಳೆಯಿಂದ ಅಪಾಯದಲ್ಲಿರುವ ಹಳೆಯ ಮನೆ ಗೋಡೆಗಳು ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾರ್ವಜನಿಕರು ಸುರಕ್ಷತೆಯ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು.
ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ಹೆಚ್ಚಿನ ಮಳೆಯಿಂದ ನೀರು ನಿಂತು ಬೆಳೆ ಹಾಳಾಗುವ ಸಾಧ್ಯತೆ ಇರುತ್ತದೆ. ಬಸಿಗಾಲುವೆಗಳ ಮೂಲಕ ನೀರನ್ನು ಜಮೀನುಗಳಿಂದ ಹೊರಹಾಕಬೇಕು.

Next Article