For the best experience, open
https://m.samyuktakarnataka.in
on your mobile browser.

ಯಾನಾಗುಂದಿ ಮಾಣಿಕೇಶ್ವರಿ ಸನ್ನಿಧಿಯಲ್ಲಿ ಮಹಾ ಪೂಜೆ

03:36 PM Mar 08, 2024 IST | Samyukta Karnataka
ಯಾನಾಗುಂದಿ ಮಾಣಿಕೇಶ್ವರಿ ಸನ್ನಿಧಿಯಲ್ಲಿ ಮಹಾ ಪೂಜೆ

ಕಲಬುರಗಿ: ಆಂಧ್ರ ಗಡಿಭಾಗದ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದ ನಂದಿಶ್ವರ ಬೆಟ್ಟದಲ್ಲಿ ಶಿವಮಂದಿರ ಹಾಗೂ ರೂಪರಹಿತ ಮಾತಾ ಮಾಣಿಕೇಶ್ವರಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪ್ರಧಾನ ಅರ್ಚಕ ಶಿವಯ್ಯ ಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ, ಪಾದಪೂಜೆ, ರುದ್ರಾಭಿಷೇಕ, ಮಹಾ ಮಂಗಳಾರತಿ ನಡೆದವು. ಉರಿಬಿಸಿಲು ಲೆಕ್ಕಿಸದೆ ಭಕ್ತಗಣ ಸರದಿ ಸಾಲಿನಲ್ಲಿ ನಿಂತು ಮಾತಾಜಿಯವರ ದರ್ಶನ ಪಡೆದು ಪುನಿತರಾದರು. ಬಂದಂತಹ ಭಕ್ತಾದಿಗಳಿಗೆ ಕುಡಿಯುವ ನೀರು ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ದಕ್ಷಿಣ ಭಾರತದ ಅರ್ಚಕ ಮಂಡಳಿಯ ಪ್ರಮುಖ ಮಾರ್ಥಂಡ್ ದೇಶಪಾಂಡೆ, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ‌ ಕಮಕನೂರ, ಬೀದರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜ್ಞಾನೇಶ್ವರ ಯಾದವ, ಅಹಿಂಸಾ ಯೋಗೇಶ್ವರ ವೀರಧರ್ಮಜ್ ಮಾತಾಜಿ ಟ್ರಸ್ಟ್ ಸದಸ್ಯ ಹಾಗೂ ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರಕರ, ಯಾದಗಿರಿ ರೈಲ್ವೆ ಸಲಹಾ ಸಮಿತಿ ಸದಸ್ಯ ಹಣಮಂತ ಮಡ್ಡಿ, ಭೀಮಾಶಂಕರ ಫಿರೋಜಾಬಾದ, ಕಸಾಪ ಅವರಾದ ವಲಯ ಅಧ್ಯಕ್ಷ ಸೂರ್ಯಕಾಂತ ಅವರಾದಿ, ಬಿಜೆಪಿ ಮುಖಂಡ ಪರ್ವತರೆಡ್ಡಿ ನಾಮವಾರ ಸೇರಿದಂತೆ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದರು.