ಕಲ್ಕಿ ಧಾಮ್ ದೇವಾಲಯದ ಶಿಲಾನ್ಯಾಸ ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದಲ್ಲಿ ಶ್ರೀ ಕಲ್ಕಿಧಾಮ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದರು.
ಸಂಭಾಲ್‌ನಲ್ಲಿರುವ ಹಿಂದೂ ಯಾತ್ರಾಸ್ಥಳ ಕಲ್ಕಿ ಧಾಮ್‌ನ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಇಂದು ಸಂತರ ಶ್ರದ್ಧಾಭಕ್ತಿ ಹಾಗೂ ಸಾರ್ವಜನಿಕರ ಉತ್ಸಾಹದಿಂದ ಮತ್ತೊಂದು ಪುಣ್ಯಕ್ಷೇತ್ರದ ಶಂಕುಸ್ಥಾಪನೆ ನಡೆಯುತ್ತಿದೆ. ಆಚಾರ್ಯರು ಮತ್ತು ಸಂತರ ಸಮ್ಮುಖದಲ್ಲಿ ಭವ್ಯವಾದ ಕಲ್ಕಿ ಧಾಮದ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಕಲ್ಕಿಧಾಮವು ಭಾರತೀಯ ನಂಬಿಕೆಯ ಮತ್ತೊಂದು ಮಹಾನ್ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ’ ಎಂದರು"
ಬಳಿಕ ಲಕ್ನೋದಲ್ಲಿ ನಡೆಯಲಿರುವ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ₹ 10 ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ . ಈ ಯೋಜನೆಗಳು ರಾಜ್ಯದಲ್ಲಿ 33.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಮತ್ತು ಪ್ರಾಥಮಿಕವಾಗಿ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಮಾಹಿತಿ ತಂತ್ರಜ್ಞಾನ, ವಸತಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ.